Thursday, September 24, 2026

BDA Apartments

Home Front Page ಸಾಲು ಸಾಲು ರಜೆ : ಮಾದಪ್ಪನ‌ ಸನ್ನಿಧಿಗೆ ಹರಿದು ಬಂದ ಭಕ್ತಸಾಗರ.

ಸಾಲು ಸಾಲು ರಜೆ : ಮಾದಪ್ಪನ‌ ಸನ್ನಿಧಿಗೆ ಹರಿದು ಬಂದ ಭಕ್ತಸಾಗರ.

ಚಾಮರಾಜನಗರ,ಡಿಸೆಂಬರ್,25,2023(www.justkannada.in): ವಾರಾಂತ್ಯದ ಜೊತೆಗೆ ಕ್ರಿಸ್ಮಸ್ ರಜೆ ಇರುವ ಹಿನ್ನಲೆಯಲ್ಲಿ ಧಾರ್ಮಿಕ ಕೇಂದ್ರಗಳತ್ತ ಭಕ್ತರ ದಂಡೇ ಆಗಮಿಸುತ್ತಿದ್ದು ಈ ಮಧ್ಯೆ ಚಾಮರಾಜನಗರ ಜಿಲ್ಲೆ ಹನೂರಿನಲ್ಲಿರುವ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೂ ಭಕ್ತಸಾಗರ ಹರಿದು ಬಂದಿದೆ.

ಸಾಲು ಸಾಲು ರಜೆ, ಫ್ರೀ ಬಸ್ ಸೌಲಭ್ಯ ಇರುವ ಕಾರಣ ಮಾದಪ್ಪನ‌ ಸನ್ನಿಧಿಗೆ ಬರುವ ಭಕ್ತರಲ್ಲಿ ಗಣನೀಯ ಏರಿಕೆಯಾಗಿದ್ದು , ಶ್ರಿ ಮಲೆ ಮಹದೇಶ್ವರ ಸನ್ನಿಧಿ ಭಕ್ತರಿಂದ ತುಂಬಿ ತುಳುಕುತ್ತಿದೆ.  ಚಿನ್ನದ ರಥ ಮೆರವಣಿಗೆ ವೇಳೆ ಸಹಸ್ರಾರು ಭಕ್ತರು ಸಮಾಗಮವಾಗಿದ್ದು ಉಘೇ ಮಾದಪ್ಪಾ ಉಘೇ ಉಘೇ ಎಂದು ಜೈಕಾರ ಹಾಕಿದ್ದಾರೆ.ಸಾಲು ಸಾಲು ರಜೆ : ಮಾದಪ್ಪನ‌ ಸನ್ನಿಧಿಗೆ ಹರಿದು ಬಂದ ಭಕ್ತಸಾಗರ male-mahadeshwara-hills male mahade...

ವಿಶೇಷ ದಿನಗಳ ಹೊರತುಪಡಿಸಿ ಸಾಮಾನ್ಯ ದಿನಗಳಲ್ಲೂ ಶ್ರೀ ಮಲೇ ಮಹದೇಶ್ವರ ಕ್ಷೇತ್ರಕ್ಕೆ  ಭಕ್ತಗಣ ಹೆಚ್ಚಾಗಿದೆ.  ಅಮಾವಾಸ್ಯೆ, ಹುಣ್ಣಿಮೆ, ವಾರಾಂತ್ಯಗಳಲ್ಲಿ ಹೆಚ್ಚಾಗುತ್ತಿರುವ  ಜನರು ಮಾದಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದು, ಈ ಬಾರಿ ಭಕ್ತರ ಭೇಟಿ ದಾಖಲೆ ಮಟ್ಟಕ್ಕೇರಿದೆ. ವಾರ್ಷಿಕ 50 ಲಕ್ಷ ಭಕ್ತರು ಮಾದಪ್ಪನ ಸನ್ನಿಧಿಗೆ ಭೇಟಿ ನೀಡುವ ಮೂಲಕ ದಾಖಲೆ ಸೃಷ್ಟಿಯಾಗಿದೆ.

Key words: Christmas- leave-devotees –male mahadeshwara hills