ಸಾಲಮನ್ನಾ ಆಸೆಗೆ ರೈತರು ಬರಗಾಲ ಬರಲಿ ಎನ್ನುತ್ತಾರೆ- ಸಚಿವ ಶಿವಾನಂದ್ ಪಾಟೀಲ್ ಉಡಾಫೆ ಮಾತು.

ಚಿಕ್ಕೋಡಿ, ಡಿಸೆಂಬರ್​ 25,2023(www.justkannada.in):  ಸಾಲಮನ್ನಾ ಆಸೆಗೆ ರೈತರು ಬರಗಾಲ ಬರಲಿ ಎನ್ನುತ್ತಾರೆ ಎಂದು ಹೇಳುವ ಮೂಲಕ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಉಡಾಫೆ ಮಾತುಗಳನ್ನಾಡಿದ್ದಾರೆ.

ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದ ವಿವಿಧೋದ್ದೇಶ ಸಹಕಾರಿ ಸಂಘದ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವ ಶಿವಾನಂದ್ ಪಾಟೀಲ್, ಪದೇ ಪದೆ ಬರಗಾಲ ಬರಲಿ ಎಂದು ರೈತರಿಗೆ ಆಸೆ ಇರುತ್ತದೆ.  ಕೃಷ್ಣಾ ನದಿ ನೀರು ಪುಕ್ಸಟ್ಟೆ ಇದೆ, ಕರೆಂಟ್‌ ಕೂಡ  ಪುಕ್ಸಟ್ಟೆ ಇದೆ. ಬಹಳಷ್ಟು ಮುಖ್ಯಮಂತ್ರಿಗಳು ಬಿತ್ತನೆ ಬೀಜ ಕೊಟ್ಟರು, ಗೊಬ್ಬರನೂ ಕೊಟ್ಟರು. ಬರಗಾಲ ಬಂದರೇ ರೈತರು ಸಾಲಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಸಾಲಮನ್ನಾ ಆಸೆಗೆ ರೈತರು ಬರಗಾಲ ಬರಲಿ ಎನ್ನುತ್ತಾರೆ. ಹಿಂದಿನ  ಸರ್ಕಾರಗಳು  ಸಾಲಮನ್ನಾ ಮಾಡಿವೆ. ಆದರೆ ಸರ್ಕಾರ  ಸಂಕಷ್ಟದಲ್ಲಿದ್ದಾಗ  ರೈತರ  ಸಾಲಮನ್ನ ಕಷ್ಟ ಸಾಧ್ಯ. ಎಂದು ಸಚಿವ ಶಿವಾನಂದ್ ಪಾಟೀಲ್ ತಿಳಿಸಿದ್ದಾರೆ.

Key words: Minister -Shivanand Patil- statement- farmers -drought