Thursday, September 24, 2026

BDA Apartments

Home Front Page ಜ್ಞಾನೇಶ್‌ ಕುಮಾರ್‌ ದೇಶದ್ರೋಹಿ: ಕೂಡಲೇ ರಾಜೀನಾಮೆ ನೀಡಬೇಕು-ರಾಹುಲ್‌ ಗಾಂಧಿ ಆಗ್ರಹ

ಜ್ಞಾನೇಶ್‌ ಕುಮಾರ್‌ ದೇಶದ್ರೋಹಿ: ಕೂಡಲೇ ರಾಜೀನಾಮೆ ನೀಡಬೇಕು-ರಾಹುಲ್‌ ಗಾಂಧಿ ಆಗ್ರಹ

ಬೆಂಗಳೂರು,ಸೆಪ್ಟಂಬರ್‌,24,2026 (www.justkannada.in) ಕೇಂದ್ರ ಚುನಾವಣಾ ಆಯೋಗದೊಳಿಗಿನ ಭಿನ್ನಾಭಿಪ್ರಾಯ ಬಹಿರಂಗವಾದ ಬೆನ್ನಲ್ಲೆ ಕೇಂದ್ರ ಮುಖ್ಯಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಒತ್ತಾಯ ಕೇಳಿ ಬಂದಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ಹಾಗೂ ಜ್ಞಾನೇಶ್‌ ಕುಮಾರ್‌ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಜ್ಞಾನೇಶ್‌ ಕುಮಾರ್‌ ದೇಶದ್ರೋಹಿ. ಕೂಡಲೇ ರಾಜೀನಾಮೆ ನೀಡಬೇಕು. 2024ರ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನವಾಗಿದೆ. ದೇಶದ ಜನರ ಮತದಾನದ ಹಕ್ಕನ್ನು ನಾಶ ಮಾಡಲಾಗುತ್ತಿದೆ.  ಮತಗಳ್ಳತನದಿಂದ ಪ್ರತಿ ಭಾರತೀಯನ ಅಧಿಕಾರ ಹನನವಾಗಿದೆ . ಪ್ರಜಾಪ್ರಬುತ್ವ ವ್ಯವಸ್ಥೆ ಹಾಳು ಮಾಡಲು ನಾವು ಬಿಡಿವುದಿಲ್ಲ ಮುಂದಿನ 6 ತಿಂಗಳಲ್ಲಿ ಎಲ್ಲವೂ ಬಹಿರಂಗವಾಗಲಿದೆ ಮತಗಳ್ಳತನಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸಾಕ್ಷ್ಯ ಇವೆ ಎಂದರು.Gyanesh Kumar modi-rahul gandhi modi rahul gandhi

ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಪಾರದರ್ಶಕತೆ ಕಾಪಾಡುವುದು ಚುನಾವಣಾ ಆಯೋಗದ ಜವಾಬ್ದಾರಿ. ಸರ್ಕಾರ ಚುನಾವಣಾ ಆಯೋಗವನ್ನ ದೊಡ್ಡ ಸ್ಥಾನದಲ್ಲಿ ಕೂರಿಸಿದೆ. ಪ್ರಧಾನಿ ಮೋದಿ, ಅಮಿತ್ ಶಾ ಇಡೀ ಪಿತೂರಿ ರೂಪಿಸಿದ್ದಾರೆ.  ಜ್ಞಾನೇಶ್‌ ಕುಮಾರ್‌ ರನ್ನು ರಕ್ಷಿಸುತ್ತಿದ್ದಾರೆ ಎಂದು ಕಿಡಿಕಾರಿದರು.Gyanesh Kumar jk02

Key words: Gyanesh Kumar, traitor, resign, immediately, Rahul Gandhi, demands.

English Summary
Title

Rahul Gandhi Demands Resignation of CEC Gyanesh Kumar Over "Treason" Allegations (

Short Description
Congress leader Rahul Gandhi has demanded the immediate resignation of Chief Election Commissioner Gyanesh Kumar, accusing the ECI, BJP, and RSS of an "act of treason" through massive voter theft. This follows a major media report revealing steep internal fractures within the Election Commission of India. Two Election Commissioners reportedly raised formal objections 14 times, alleging CEC Gyanesh Kumar altered electoral rolls without their consent, leading to the deletion of over 13 crore voters. While the ECI defended the process as routine internal dissent and the BJP dismissed the claims as a political attack, the opposition maintains the integrity of Indian democracy is compromised.
Keywords
Gyanesh Kumar, traitor, resign, immediately, Rahul Gandhi, demands.