ಡಿಸೆಂಬರ್’ನಲ್ಲಿ ಚಿತ್ರಮಂದಿರಕ್ಕೆ ಬರಲಿದ್ದಾರೆ ‘ಉಪಾಧ್ಯಕ್ಷರು’!

ಬೆಂಗಳೂರು, ನವೆಂಬರ್ 03, 2023 (www.justkannada.in): ಚಿಕ್ಕಣ್ಣ ನಾಯಕನಾಗಿ ಅಭಿನಯಿಸಿರುವ ‘ಉಪಾಧ್ಯಕ್ಷ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಅನಿಲ್ ಕುಮಾರ್ ನಿರ್ದೇಶನ ಮತ್ತು ಉಮಾಪತಿ ಫಿಲಂಸ್ ಮತ್ತು ಡಿಎನ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದ ಟೀಸರ್ ಮತ್ತು ಹಾಡುಗಳು ಈಗಾಗಲೇ ಸಾಕಷ್ಟು ಗಮನ ಸೆಳೆದಿವೆ.

ಅಂದಹಾಗೆ ಉಪಾಧ್ಯಕ್ಷ ಎಂಬ ಶೀರ್ಷಿಕೆಯನ್ನು ಶರಣ್ ಅವರ ಅಧಕ್ಷ್ಯದಲ್ಲಿ ಚಿತ್ರಿಸಿದ ಚಿಕ್ಕಣ್ಣ ಪಾತ್ರದಿಂದ ಪಡೆಯಲಾಗಿದೆ. ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ಮಾರ್ಟಿನ್ ನಿರ್ದೇಶಕ ಎಪಿ ಅರ್ಜುನ್ ಸಾಹಿತ್ಯ ಬರೆದಿದ್ದಾರೆ.

ಚಿಕ್ಕಣ್ಣ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ್ದು, ಗಮನ ಸೆಳೆದಿದ್ದಾರೆ. ಡಿಸೆಂಬರ್’ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.