Friday, August 7, 2026

BDA Apartments

Home Crime ಪ್ರೇಮಕುಮಾರಿಗೆ ವಂಚನೆ, ಜೀವಬೆದರಿಕೆ ಆರೋಪ ಪ್ರಕರಣ: ಮಾಜಿ ಸಚಿವ ಎಸ್.ಎ ರಾಮದಾಸ್ ಗೆ ಸಮನ್ಸ್ ಜಾರಿ…

ಪ್ರೇಮಕುಮಾರಿಗೆ ವಂಚನೆ, ಜೀವಬೆದರಿಕೆ ಆರೋಪ ಪ್ರಕರಣ: ಮಾಜಿ ಸಚಿವ ಎಸ್.ಎ ರಾಮದಾಸ್ ಗೆ ಸಮನ್ಸ್ ಜಾರಿ…

ಬೆಂಗಳೂರು,ಅ,21,2019(www.justkannada.in): ಪ್ರೇಮಕುಮಾರಿಗೆ ವಂಚನೆ, ಜೀವಬೆದರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಸ್.ಎ ರಾಮದಾಸ್ ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

2014ರಲ್ಲಿ  ಮಾಜಿ ಸಚಿವ ಎಸ್.ಎ ರಾಮದಾಸ್ ವಿರುದ್ದ ಜೀವ ಬೆದರಿಕೆ ಮತ್ತು ವಂಚನೆ ಮಾಡಿದ್ದಾರೆಂದು ಆರೋಪಿಸಿ ಪ್ರೇಮಕುಮಾರಿ ಅವರು ದೂರು ಸಲ್ಲಿಸಿದ್ದರು. ಪ್ರಕರಣ ಸಂಬಂಧ ಸರಸ್ವತಿಪುರಂ ಠಾಣಾ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು.

ಬಿ.ರಿಪೋರ್ಟ್ ಪ್ರಶ್ನಿಸಿ ಪ್ರೇಮಕುಮಾರಿ ಅವರು ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಾಜಿ ಸಚಿವ ಎಸ್.ಎ ರಾಮದಾಸ್ ಗೆ ಸಮನ್ಸ್ ಜಾರಿ ಮಾಡಿ ನವೆಂಬರ್ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

Key words: Cheating- case –premakumariFormer Minister- SA Ramadas -summons