Sunday, August 23, 2026

BDA Apartments

Home Cinema ಶೂಟಿಂಗ್’ಗಾಗಿ ವಿದೇಶಕ್ಕೆ ಹೋಗಬೇಕಾದ ಸಂಕಷ್ಟದಲ್ಲಿ ಚಾರ್ಲಿ 777

ಶೂಟಿಂಗ್’ಗಾಗಿ ವಿದೇಶಕ್ಕೆ ಹೋಗಬೇಕಾದ ಸಂಕಷ್ಟದಲ್ಲಿ ಚಾರ್ಲಿ 777

ಬೆಂಗಳೂರು, ಜೂನ್ 09, 2020 (www.justkannada.in): ಚಾರ್ಲಿ 777 ಚಿತ್ರ ತಂಡ ಮಾತ್ರ ಕೊರೋನಾ ಕಾರಣದಿಂದಲೇ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡಿಕೊಂಡು ಬರಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ.

ರಕ್ಷಿತ ಶೆಟ್ಟಿ ಅವರ ನಿರ್ಮಾಣದ ಈ ಚಿತ್ರದಲ್ಲಿ ಒಂದು ನಾಯಿ ಹಾಗೂ ಮಾನವನ ನಡುವಿನ ಸಂಬಂದದ ಕಥೆಯನ್ನು ಹೇಳಲಾಗಿದೆ. ಈ ಹಿಂದೆ ಚಾರ್ಲಿ ಸಿನಿಮಾದ ಪ್ರಮುಖ ಭಾಗವನ್ನು ಭಾರತದ ಹಿಮಚ್ಚಾದಿತ ಪ್ರದೇಶವಾದ ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಿಸಲು ಯೋಜನೆ ರೂಪಿಸಲಾಗಿತ್ತು.

ಇನ್ನೇನು ಚಿತ್ರತಂಡ ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಬೆಳೆಸಬೇಕು ಎನ್ನುವಷ್ಟರಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿ ಜರ್ನಿ ಕ್ಯಾನ್ಸಲ್ ಆಯಿತು. ಈಗ ಲಾಕ್ಡೌನ್ ಕೊನೆಗೊಳ್ಳುವ ಸಮಯ ಸನಿಹವಾಗಿದೆ, ಆದರೆ ಚಾರ್ಲಿ 777 ಚಿತ್ರತಂಡ ಮಾತ್ರ ವಿದೇಶಕ್ಕೇ ಹೋಗಿ ಚಿತ್ರೀಕರಿಸಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದೆ.