ದೇಶದ ಹೆಸರು ಬದಲಾವಣೆ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ, ಸೆಪ್ಟೆಂಬರ್ 11,2023(www.justkannada.in):  ಇಂಡಿಯಾ ಬದಲಿಗೆ ಭಾರತ್ ಎಂದು ಹೆಸರು ಬದಲಾವಣೆ ಮಾಡಲಾಗುತ್ತದೆ ಎಂಬ ವದಂತಿ ಹಿನ್ನೆಲೆ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದೇಶದ ಹೆಸರು ಬದಲಾವಣೆ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಭಾರತ್ ಎಂದು ಮರುನಾಮಕರಣ ಮಾಡುತ್ತೇವೆ ಎಂಬುದಾಗಿ ಎಲ್ಲೂ ಹೇಳಿಲ್ಲ. ಭಯ ಇದ್ದವರು ಹೀಗೆ ಮಾತನಾಡುತ್ತಿದ್ದಾರೆ. ನಾವು ಭಾರತ ಎಂದು ಕರೆಯುತ್ತೇವೆ. ನಿಮಗೆ ಹೇಗೆ ಬೇಕೋ ಹಾಗೆ ನೀವು ಕರೆಯಬಹುದು ಎಂದು  ತಿಳಿಸಿದರು.‌

ಈಗ ಜಗತ್ತಿನ ನಾಯಕತ್ವದಲ್ಲಿ ಭಾರತ ಕೂಡ ಇದೆ. ಪ್ರಮುಖ ದೇಶಗಳ ಜೊತೆ ನಾವಿರುತ್ತೇವೆ ಅಂದಾಗ ಅಪಹಾಸ್ಯ ಮಾಡಿದರು. ಈ ಹಿಂದೆ ನರೇಂದ್ರ ಮೋದಿ‌ಯವರು ಹೇಳಿದಾಗ ಅಪಹಾಸ್ಯ ಮಾಡಿದ್ದರು. ನಾವೆಲ್ಲರೂ ನಾಯಕತ್ವ ಕಣ್ಮುಂದೆ ನೋಡಿದ್ದೇವೆ, ಇದು ನಮ್ಮ ಸೌಭಾಗ್ಯ. ಜಿ-20 ಶೃಂಗಸಭೆಯಲ್ಲಿ ಹಸಿರು ಇಂಧನದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words: change -name –india-Bharath – Union Minister -Prahlad Joshi.