ಬಿಜೆಪಿ-ಜೆಡಿಎಸ್ ಮೈತ್ರಿಯಾದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲ್ಲ- ಮಾಜಿ ಸಚಿವ ಆರ್.ಅಶೋಕ್.

ಮೈಸೂರು,ಸೆಪ್ಟಂಬರ್,11,2023(www.justkannada.in): ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಯಾದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲ್ಲ ಎಂದು  ಮಾಜಿ ಸಚಿವ ಆರ್.ಅಶೋಕ್  ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಆರ್.ಅಶೋಕ್, ಬಿಜೆಪಿ-ಜೆಡಿಎಸ್ ಮೈತ್ರಿ ಸಂಬಂಧ ದೇವೇಗೌಡರು,  ಕುಮಾರಸ್ವಾಮಿ ಜೊತೆ ಮಾತನಾಡದ್ದೇವೆ.  ಆದರೆ ಇನ್ನೂ ಮೈತ್ರಿ ವಿಚಾರ ಫೈನಲ್ ಆಗಿಲ್ಲ. ಆಗಲೇ ಕಾಂಗ್ರೆಸ್ ನವರು ದೆವ್ವ ಬಂದವರರ ರೀತಿ ಆಡುತ್ತಿದ್ದಾರೆ. ಮೈತ್ರಿಯಾದರೇ ರಾಜ್ಯದಲ್ಲಿ ಕಾಂಗ್ರೆಸ್ ಒಂದು ಸ್ಥಾನವೂ ಗೆಲ್ಲಲ್ಲ. ಆ ಭಯದಿಂದ ಕಾಂಗ್ರೆಸ್ ನವರು ಟೀಕೆ ಮಾಡುತ್ತಿದ್ದಾರೆ ಎಂದರು.

ಮೈತ್ರಿ ಬಗ್ಗೆ ಪ್ರಧಾನಿ ಮೋದಿ ತೀರ್ಮಾನ ಮಾಡುತ್ತಾರೆ. ಮೈತ್ರಿಯಾದರೇ ಒಳ್ಳಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೀಟು ಹಂಚಿಕೆ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಆರ್.ಅಶೋಕ್ ತಿಳಿಸಿದರು.

Key words: Congress -will not -win -single -seat – BJP-JDS- alliance – R. Ashok.