Thursday, August 6, 2026

BDA Apartments

Home Front Page BREAKING NOW; ಚಾಮರಾಜನಗರಕ್ಕೂ ಕಾಲಿಟ್ಟ ಕರೋನಾ : ಮುಂಬೈ ಮೂಲದ ಮೆಡಿಕಲ್ ಸ್ಟೂಡೆಂಟ್ ಗೆ...

BREAKING NOW; ಚಾಮರಾಜನಗರಕ್ಕೂ ಕಾಲಿಟ್ಟ ಕರೋನಾ : ಮುಂಬೈ ಮೂಲದ ಮೆಡಿಕಲ್ ಸ್ಟೂಡೆಂಟ್ ಗೆ ಪಾಸಿಟಿವ್ .

 

ಚಾಮರಾಜನಗರ, ಜೂ.09, 2020 : (www.justkannada.in news) : ಕರೋನಾ ಮುಕ್ತವಾಗಿದ್ದ ಜಿಲ್ಲೆಗೂ ಇದೀಗ ಕರೋನಾ ಸೊಂಕು ತಗುಲಿದೆ. ಮುಂಬೈ ಮೂಲದ ವ್ಯಕ್ತಿಗೆ ಕೋವಿಡ್ 19 ದೃಢಪಟ್ಟಿದ್ದು, ಆತನನ್ನು ಐಸೊಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂಬೈ ಮೂಲದ ಅಂತಿಮ ವರ್ಷದ ಮೆಡಿಕಲ್ ಸ್ಟುಡೆಂಟ್ ಗೆ ಕರೋನಾ ಪಾಸಿಟಿವ್ ದೃಢಪಟ್ಟಿದೆ. ಈತನನ್ನು ಈಗಾಗೇ ಐಸೋಲೇಷನ್ ವಾರ್ಡ್ ಗೆ ಶಿಫ್ಟ್ ಮಾಡಿರುವ ಕಾರಣ ಆತಂಕಕ್ಕೆ ಕಾರಣವಿಲ್ಲ.

ಘಟನೆಗೆ ಸಂಬಂಧಿಸಿದಂತೆ ಚಾ.ನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಸ್ಟ್ ಕನ್ನಡ ಡಾಟ್ ಇನ್ ಗೆ ಮಾಹಿತಿ ನೀಡಿದ್ದು ಹೀಗೆ…
ಈತ ಕಳೆದ ಶುಕ್ರವಾರ ತನ್ನ ತಾಯಿ ಜತೆ ಮುಂಬೈನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಚಾಮರಾಜನಗರಕ್ಕೆ ಕುಟುಂಬವೊಂದು ಆಗಮಿಸಿತ್ತು . ಇಲ್ಲಿ ಅವರ ಚಿಕ್ಕಪ್ಪ ಜಾನ್ ಎಂಬುವವರ ಮನೆಯಲ್ಲಿ ಅವರೆಲ್ಲಾ ಉಳಿದುಕೊಂಡಿದ್ದರು. ಈ ವ್ಯಕ್ತಿಗಳು ಮುಂಬೈನಿಂದ ಬಂದಿರುವ ಸುದ್ದಿ ತಿಳಿದು ಆರೋಗ್ಯ ಇಲಾಖೆಯವರು ಈ ಕುಟುಂಬದವರಿಗೆ ಕರೋನಾ ಟೆಸ್ಟ್ ನಡೆಸಿದರು.

chamarajanagara-one-corona-positive-case-reported-medical-student-from-Maharashtra

ಈ ಪೈಕಿ ತಾಯಿ ಹಾಗೂ ಮತ್ತೊರ್ವ ಸಹೋದರನಿಗೆ ನೆಗೆಟಿವ್ ಬಂದಿದ್ದು, ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಯುವಕನಿಗೆ ಮಾತ್ರ ಪಾಸಿಟಿವ್ ಗೋಚರಿಸಿದೆ. ಕೂಡಲೇ ಆತನನ್ನು ಐಸೋಲೇಷನ್ ವಾರ್ಡ್ ಗೆ ಸ್ಥಳಾಂತರಿಸಲಾಗಿದ್ದು, ಆತಂಕಕ್ಕೆ ಕಾರಣವಿಲ್ಲ ಎಂದಿದ್ದಾರೆ.

oooo

key words : chamarajanagara-one-corona-positive-case-reported-medical-student-from-Maharashtra