ಚಾಲೆಂಜಿಂಗ್ ಸ್ಟಾರ್ ‘ರಾಬರ್ಟ್’ ಫಸ್ಟ್ ಲುಕ್ ರಿಲೀಸ್

ಬೆಂಗಳೂರು, ಡಿಸೆಂಬರ್ 25, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಫಸ್ಟ್ ಲುಕ್ ಇಂದು  ಬಿಡುಗಡೆಯಾಗಿದೆ.

ಒಡೆಯ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಇಂದು ರಾಬರ್ಟ್ ಉಡುಗೊರೆ ಸಿಕ್ಕಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಇಂದು ಈ ಸಿನಿಮಾದಲ್ಲಿ ದರ್ಶನ್ ಲುಕ್ ರಿವೀಲ್ ಮಾಡಿದೆ.

ತರುಣ್ ಸುಧೀರ್ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ಜತೆಗೆ ವಿನೋದ್ ಪ್ರಭಾಕರ್ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಆಶಾ ಭಟ್ ಚಿತ್ರದ ನಾಯಕಿ.