ಅಕ್ಷಯ್- ಕರೀನಾ ‘ಗುಡ್ ನ್ಯೂಸ್’ ಚಿತ್ರಕ್ಕೆ ಬ್ಯಾಡ್ ನ್ಯೂಸ್ !

ಬೆಂಗಳೂರು, ಡಿಸೆಂಬರ್ 25, 2019 (www.justkannada.in): ಅಕ್ಷಯ್ ಕುಮಾರ್ ಹಾಗೂ ಕರೀನಾ ಕಪೂರ್ ಅಭಿನಯದ ಗುಡ್ ನ್ಯೂಸ್ ಚಲನಚಿತ್ರ ಬ್ಯಾಡ್ ನ್ಯೂಸ್ ಎದುರಾಗಿದೆ.

ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಹೌದು. ಗುಡ್‌ ನ್ಯೂಸ್‌ ಸಿನಿಮಾಗೆ ತಡೆ ನೀಡುವಂತೆ ಸಮೀಮ್ ರಝಾ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣವನ್ನು ಡಿ.27ಕ್ಕೆ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ. ಕೃತಕ ಗರ್ಭಧಾರಣೆ ಚಿಕಿತ್ಸೆ ಚಿತ್ರದ ಕಥಾವಸ್ತುವಾಗಿದೆ.

ಚಿತ್ರದ “ಇಂದಿರಾ ಐವಿಎಫ್” ಎಂಬ ಸಂಸ್ಥೆ ಹೊರತುಪಡಿಸಿ ಉಳಿದ ಸಂಸ್ಥೆಗಳಲ್ಲಿ ಸರಿಯಾದ ಚಿಕಿತ್ಸೆ ದೊರೆಯುವುದಿಲ್ಲ ಎನ್ನುವ ಅರ್ಥ ಕೊಡುವಂತಿದೆ. ಇದರಿಂದ ಜನರಿಗೆ ಐವಿಎಫ್ ಚಿಕಿತ್ಸೆ ಬಗ್ಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.