Tuesday, October 13, 2026

Dasara Wishes

Happy Dasara
Home Cinema ಬಿಡುಗಡೆಗೆ ಸಜ್ಜಾದ ‘ರಾಬರ್ಟ್’

ಬಿಡುಗಡೆಗೆ ಸಜ್ಜಾದ ‘ರಾಬರ್ಟ್’

ಬೆಂಗಳೂರು,ಮಾ,10(www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್  ನಟನೆಯ ಬಹುನಿರೀಕ್ಷಿತ ಸಿನಿಮಾ ‘ರಾಬರ್ಟ್ ಬಿಡುಗಡೆಗೆ ಸಜ್ಜಾಗಿದ್ದು ‘ ಏಪ್ರಿಲ್ 9 ರಂದು  ರಿಲೀಸ್ ಆಗುವ ನಿರೀಕ್ಷೆ ಇದೆ.

ಬಿಡುಗಡೆಗೆ ಮುನ್ನವೇ ಗಳಿಕೆಯಲ್ಲಿ ದಾಖಲೆ ಬರೆದ ‘ರಾಬರ್ಟ್’ ಚಿತ್ರೀಕರಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಗುಜರಾತಿನ ಕಛ್ ಪ್ರದೇಶದಲ್ಲಿ ‘ರಾಬರ್ಟ್’ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ರಾಬರ್ಟ್ ಬಿಡುಗಡೆಗೂ ಮೊದಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ.

ವಿದೇಶದಲ್ಲಿ ಚಿತ್ರೀಕರಣ ನಡೆಸಬೇಕಿತ್ತಾದರೂ ಕೊರೋನಾ ವೈರಸ್ ಭೀತಿಯಿಂದ ದೇಶದಲ್ಲಿಯೇ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಏಪ್ರಿಲ್ 9 ರಂದು ಚಿತ್ರ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.