ಡಿಕೆ ಶಿವಕುಮಾರ್ ಸಿಎಂ ಆದರೆ ನನಗೆ ಸಂತೋಷ- ಛಲವಾದಿ ನಾರಾಯಣಸ್ವಾಮಿ

ರಾಮನಗರ, ಅಕ್ಟೋಬರ್,24,2025 (www.justkannada.in): ಸತೀಶ್ ಜಾರಕಿಹೊಳಿ  ಭವಿಷ್ಯದ ನಾಯಕ ಎಂಬ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ  ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಇದೀಗ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಡಿಕೆ ಶಿವಕುಮಾರ್ ಸಿಎಂ ಆದರೆ ನನಗೆ ಸಂತೋಷ ಎಂಬ ಹೇಳಿಕೆಯನ್ನ ನೀಡಿದ್ದಾರೆ.

ಇಂದು ರಾಮನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆದರಗೆ ನನಗೆ ಸಂತೋಷ. ಸಿಎಂ ಆಗಿ ಸಿದ್ದರಾಮಯ್ಯ 7.5 ವರ್ಷ ಪೂರೈಸಿದ್ದಾರೆ. ಡಿಕೆ ಶಿವಕುಮಾರ್ ಕೂಡ ಪಕ್ಷವನ್ನ ಕಟ್ಟಿದ್ದಾರೆ.  ನಾನು ಡಿಕೆ ಶಿವಕುಮಾರ್ ಬಹಳ ವರ್ಷಗಳ ಕಾಲ ಜೊತೆಯಲ್ಲಿದ್ದೆವು ಎಂದರು.

ಡಿಕೆ ಶಿವಕುಮಾರ್ ಸಿಎಂ ಆದರೆ ನನಗೆ ಸಂತೋಷ. ಪರಮೇಶ್ವರ್ ಸಿಎಂ ಆದರೂ ಸಹ ಸಂತೋಷ.  ಆದರೆ ಕಾಂಗ್ರೆಸ್ ಪಕ್ಷದಲ್ಲಿ ದಲಿತರನ್ನ ಸಿಎಂ ಮಾಡಲ್ಲ ಎಂದು  ಛಲವಾದಿ ನಾರಾಯಣಸ್ವಾಮಿ ಕುಟುಕಿದರು.

Key words: I am, happy, DK Shivakumar , CM, Chalavadi Narayanaswamy