Friday, July 31, 2026

BDA Apartments

Home Front Page ಕಾಂಗ್ರೆಸ್ ಗೆ ಯಾರೂ ಕೂಡ ಅನಿವಾರ್ಯವಲ್ಲ: ಎಲ್ಲವನ್ನೂ ಹೈಕಮಾಂಡ್ ತೀರ್ಮಾನಿಸುತ್ತೆ- ಸಚಿವ ಹೆಚ್.ಸಿ ಮಹದೇವಪ್ಪ

ಕಾಂಗ್ರೆಸ್ ಗೆ ಯಾರೂ ಕೂಡ ಅನಿವಾರ್ಯವಲ್ಲ: ಎಲ್ಲವನ್ನೂ ಹೈಕಮಾಂಡ್ ತೀರ್ಮಾನಿಸುತ್ತೆ- ಸಚಿವ ಹೆಚ್.ಸಿ ಮಹದೇವಪ್ಪ

ಬೆಂಗಳೂರು,ಅಕ್ಟೋಬರ್,24,2025 (www.justkannada.in):  ಸತೀಶ್ ಜಾರಕಿಹೊಳಿ ಭವಿಷ್ಯದ ನಾಯಕ ಎಂಬ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಯಾವಾಗ ಏನಾಗಬೇಕೆಂಬುದನ್ನ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದನ್ನ ಬಿಟ್ಟರೇ ಬೇರೆಯವರ ಮಾತಿಗೆ ಮಾನ್ಯತೆ ಇಲ್ಲ.  ಯತೀಂದ್ರ ಹೇಳಿಕೆಗೆ ನಾನು ವಿವರಣೆ ನೀಡುವುದಿಲ್ಲ ಎಂದರು.

ನಮ್ಮ ಹೈಕಮಾಂಡ್ ಏನ್ ಹೇಳುತ್ತೆ ಅದೇ ಫೈನಲ್. ಸಿಎಂ, ಹೈಕಮಾಂಡ್ ಇದೆ. ಅವರು ನೋಡಿಕೊಳ್ಳುತ್ತಾರೆ.  ಕಾಂಗ್ರೆಸ್ ವ್ಯವಸ್ಥೆಗೆ ಯಾರೂ ಕೂಡ ಅನಿವಾರ್ಯವಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಯಾರೂ ಕೂಡ ಅನಿವಾರ್ಯವಲ್ಲ.  ಸಿದ್ದರಾಮಯ್ಯ ಈಗ ಸಿಎಂ ಆಗಿದ್ದಾರೆ. ಬದಲಾವಣೆ ಎಲ್ಲಿ?  ನಾವು ತುಂಬಾ ಕ್ಲಿಯರ್ ಆಗಿದ್ದೇವೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.

Key words: indispensable, Congress, High Command, Minister, HC Mahadevappa