ಮೈಸೂರು ತಾಲ್ಲೂಕಿನ ಗ್ರಾ.ಪಂಗಳಿಗೆ ಸಿಇಒ ಭೇಟಿ, ಪರಿಶೀಲನೆ: ಸಹಾಯವಾಣಿ ತೆರೆಯಲು ಸೂಚನೆ..

ಮೈಸೂರು,ಮೇ,27,2021(www.justkannada.in):  ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮೈಸೂರು ತಾಲ್ಲೂಕಿನ ಕೆಲ ಗ್ರಾಪಂಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ.ಎಂ.ಯೋಗೀಶ್ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.jk

ಮೈಸೂರು ತಾಲೂಕಿನ ನಾಗವಾಲ, ಧನಗಹಳ್ಳಿ, ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ.ಎಂ.ಯೋಗೀಶ್ ಭೇಟಿ ನೀಡಿ ಪರಿಶೀಲಿಸಿದರು.

ನಾಗವಾಲ ಗ್ರಾಪಂ ಭೇಟಿ ನೀಡಿದ ವೇಳೆ ಅಲ್ಲಿನ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಎ.ಎಂ ಯೋಗೀಶ್, ಸೋಂಕಿತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.  ಹಾಗೆಯೇ ಮನೆ ಮನೆ ಸರ್ವೆ ಸಮೀಕ್ಷೆ ಕಾರ್ಯ ಅಪೂರ್ಣಗೊಂಡಿದ್ದು, ಅದನ್ನು ಪೂರ್ಣಗೊಳಿಸಲು ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು. ನರೇಗಾ ಯೋಜನೆಯಡಿ ನಡೆಯುತ್ತಿರುವ ಕಲ್ಯಾಣಿ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಇದೇ ವೇಳೆ ಸಿಇಒ ಯೋಗೀಶ್ ವೀಕ್ಷಿಸಿದರು.

ದೊಡ್ಡಮರಗೌಡನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕಾರ್ಯಪಡೆ, ಸೋಂಕಿತರು ಮತ್ತು ಮಹಾತ್ಮ-ನರೇಗಾ ಯೋಜನೆಯಡಿ ಕಾಮಗಾರಿ ಪ್ರಗತಿ ಪರಿಶೀಲನೆ, ಅಂತರ್ಜಲ ಚೇತನ ಯೋಜನೆ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಹೋಮ್ ಐಸೋಲೇಷನ್ ನಲ್ಲಿರುವವರನ್ನು ನೋಡಿಕೊಳ್ಳುವುದು ಗ್ರಾಪಂ ಸದಸ್ಯರು,  ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ನಂತರ ಧನಗಹಳ್ಳಿ ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಾತ್ಮ ಗಾಂಧಿ-ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿದರು. ಕೋವಿಡ್ ಸಂಬಂಧಿಸಿದಂತೆ ಅಂಕಿ ಅಂಶಗಳ ಮಾಹಿತಿ ಪಡೆದುಕೊಂಡರು.

ಸಹಾಯವಾಣಿ ಕೇಂದ್ರ ತೆರೆಯಲು ಸೂಚನೆ:

ಗ್ರಾಪಂಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಇಒ ಎ.ಎಂ.ಯೋಗೀಶ್ ಅವರು ಕೊರೊನಾ ಸೋಂಕಿತರ ಸಹಾಯಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲು  ಆದೇಶಿಸಿದರು. ಅದರಂತೆ ಸಹಾಯವಾಣಿ ಕೇಂದ್ರದಿಂದ ಕೊರೊನಾದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಸೂಚಿಸಿದರು.

Key words: CEO –AM Yogish-visits – inspection -Mysore Taluk- grama panchayath