ಎರಡು ಮೂರು ಬಾರಿ ಸಚಿವರಾದವರು ರಾಜೀನಾಮೆ ನೀಡಲಿ ಎಂದ ಶಾಸಕ ಎಂ.ಪಿ ರೇಣುಕಾಚಾರ್ಯ.

ಹುಬ್ಬಳ್ಳಿ,ಡಿಸೆಂಬರ್,29,2021(www.justkannada.in): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ಎಂ.ಪಿ ರೇಣುಕಾಚಾರ್ಯ ಇದೀಗ ಹಿರಿಯ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು, ಎರಡು ಮೂರು ಬಾರಿ ಸಚಿವರಾಗಿದ್ದವರು ರಾಜೀನಾಮೆ ನೀಡಲಿ ಹೊಸಮುಖಗಳಿಗೆ ಅವಕಾಶ ಕೊಡಬೇಕು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಈ ಕುರಿತು ಮಾತನಾಡಿದ ಅವರು, ಸಚಿವ ಸ್ಥಾನ ಅನುಭವಿಸಿದವರು ರಾಜೀನಾಮೆ ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡಲಿ. ನನಗೆ ಸಚಿವ ಸ್ಥಾನ ಕೊಡಬೇಕು ಎಂದಿಲ್ಲ. ಆದರೆ ಯಾರಿಗಾದರೂ ಮಂತ್ರಿಗಿರಿ ಕೊಡಲಿ. ಹೊಸಮುಖಗಳಿಗೆ ಅವಕಾಶ ನೀಡಬೇಕು ಎಂದರು.

ಕರ್ನಾಟಕ ಬಂದ್ ಕುರಿತು ಪ್ರತಿಕ್ರಿಯಿಸಿದ ಎಂಪಿ ರೇಣುಕಾಚಾರ್ಯ, ಬಂದ್ ಮಾಡುವುದರಿಂದ ಅರ್ಥವಿಲ್ಲ. ಎಂಇಎಸ್ ಬ್ಯಾನ್ ಆಗುವುದಿಲ್ಲ,.  ಎಂಇಎಸ್ ಪುಂಡಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದರು.

Key words: MLA- MP Renukacharya – ministers –should- resign.