‘ಕೋವಿಡ್ ಮಿತ್ರ’ ಕಲ್ಪನೆ ಯಾರದ್ದು ಎಂಬ ಪ್ರಶ್ನೆಗೆ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಉತ್ತರಿಸಿದ್ದು ಹೀಗೆ.

ಮೈಸೂರು,ಮೇ,27,2021(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಾರಿಯಾಗಿರುವ ಕೋವಿಡ್ ಮಿತ್ರ ಕಲ್ಪನೆ ಯಾರದ್ದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಇದರಲ್ಲಿ ನಾವೂ ನೀವು ಅಂತ ಹೇಳಿಕೊಳ್ಳುವುದು ಬೇಡ. ಪಾಲಿಕೆ,  ಜಿಲ್ಲಾಡಳಿತ, ಆರೋಗ್ಯ ಇಲಾಖೆ ,ಮೂಡಾ ಎಲ್ಲರ ನೇತೃತ್ವ ಸಹಕಾರದಿಂದ ಇದು ಜಾರಿಯಲ್ಲಿದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಎಲ್ಲರು ಒಟ್ಟಾಗಿ ಕೋವಿಡ್ ಮಿತ್ರ ಜಾರಿ ಮಾಡಿದ್ದೇವೆ. ಪ್ರಮುಖವಾಗಿ ಸ್ವಯಂ ಸೇವಕರು, ಸಂಘ ಸಂಸ್ಥೆಗಳು ಇದರ ಬ್ಯಾಕ್ ಬೋನ್. ಮೈಸೂರು ಪಾಲಿಕೆ ಕೂಡ ಜಿಲ್ಲಾಡಳಿತದ ಒಂದು ಅಂಗವಾಗಿದೆ. ಈಗ ಅಪಾರ್ಟ್ ಮೆಂಟ್ ಗಳಲ್ಲಿ ಮಿನಿ ಕೋವಿಡ್ ಮಿತ್ರ ಕೂಡ ಆರಂಭಿಸುತ್ತಿದ್ದೇವೆ. ನಗರದಲ್ಲಿ 5 ಕೋವಿಡ್ ಮಿತ್ರ ಬಹಳ ಯಶಸ್ವಿಯಾಗಿ ನಡೆಯುತ್ತಿವೆ. ಯಾವುದೇ ರೀತಿ ತೊಂದರೆ ಇಲ್ಲ.  ಜಿಲ್ಲೆ 21 ಪಿಎಚ್ ಸಿಗಳಲ್ಲೂ ಸಹ ಕೋವಿಡ್ ಮಿತ್ರ ಹೆಸರಿನಲ್ಲೆ ನಡೆಯುತ್ತಿವೆ ಎಂದು ಹೇಳಿದರು.workers-died-corona-5-lakhs-compensation-mysore-city-corporation-commissioner-shilpanag

ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ವಿಚಾರ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ನಮಗೆ ಮಾಧ್ಯಮಗಳಿಂದಷ್ಟೆ ಈ ವಿಚಾರ ತಿಳಿದುಬಂದಿದೆ. ನಮಗೆ ಅಧಿಕೃತವಾಗಿ ಯಾವುದೇ ಆದೇಶ ಬಂದಿಲ್ಲ. ಬಂದ ನಂತರ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗುತ್ತೆ. ಅವರ ಮಾರ್ಗದರ್ಶನ ಪಡೆದು ಮುಂದುವರೆಯುತ್ತೇವೆ. ಚುನಾವಣೆ ಹೇಗೆ?, ಈ ಮಧ್ಯೆ ಮೇಯರ್ ಅಧಿಕಾರ ಯಾರಿಗೆ ಕೊಡಬೇಕು ಎಂಬುದನ್ನು ಚರ್ಚಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Key words: covid mitra- Mysore city corporation- Commissioner- Shilpanag