ಕೇಂದ್ರ ಬಜೆಟ್: ಕರಕುಶಲಕರ್ಮಿಗಳಿಗೆ ನೂತನ ಯೋಜನೆ ಘೋಷಣೆ.

ನವದೆಹಲಿ,ಫೆಬ್ರವರಿ,1,2023(www.justkannada.in): ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದು, ಕರಕುಶಲಕರ್ಮಿಗಳಿಗೆ ನೂತನ ಯೋಜನೆ ಘೋಷಣೆ ಮಾಡಿದ್ದಾರೆ.

ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರಕುಶಲಕರ್ಮಿಗಳಿಗೆ ಪ್ರಧಾನಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಯೋಜನೆ ಜಾರಿ ಮಾಡಲಾಗುತ್ತಿದೆ. ಕೋವಿನ್, ಆಧಾರ್ ಹಾಗೂ ಯುಪಿಎ ವ್ಯವಸ್ಥೆ ನಿರ್ವಹಣೆಗೆ ವಿಶ್ವಮನ್ನಣೆ ಸಿಕ್ಕಿದೆ. ಪಿಎಂ ವಿಕಾಸ್ ಹೊಸ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದರು.

47 ಕೋಟಿ ಜನ್ ಧನ್ ಖಾತೆ ತೆರೆಯಲಾಗಿದೆ. ಭಾರತಕ್ಕೆ ವಿಶ್ವ ನೀಡಿರುವ ಮನ್ನಣೆಗೆ ಜಿ.20ಯೇ ಸಾಕ್ಷಿ. ಆರ್ಥಿಕತೆಯಲ್ಲಿ ವಿಶ್ವದಲ್ಲೇ ಭಾರತಕ್ಕೆ 5ನೇ ಸ್ಥಾನ ಬಂದಿದೆ.

14 ಕೋಟಿ ರೈತರಿಗೆ 2.7 ಲಕ್ಷ ಕೋಟಿ ವಿಮೆ ಹಂಚಿಕೆ ಮಾಡಿದ್ದೇವೆ. 220ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ್ದೇವೆ ನೀಡಿದ್ದೇವೆ. 81 ಲಕ್ಷ ಸ್ವಸಹಾಯ ಗುಂಪಿಗೆ ಸಹಾಯ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

Key words: Central Budget- New scheme- announced – artisans.

.