ಬಜೆಟ್ ಮಂಡನೆ ಆರಂಭ: ಉಚಿತ ಆಹಾರ ಧಾನ್ಯ ವಿತರಣೆ ಒಂದು ವರ್ಷ ವಿಸ್ತರಣೆ.

ನವದೆಹಲಿ,ಫೆಬ್ರವರಿ,1,2023(www.justkannada.in): ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್ ಮಂಡನೆ ಆರಂಭವಾಗಿದ್ದು, ಉಚಿತ ಆಹಾರ ಧಾನ್ಯ ವಿತರಣೆ ಒಂದು ವರ್ಷ ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

ಕೇಂಧ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗೆ 2 ಲಕ್ಷ ಕೋಟಿ ರೂ.ಘೋಷಣೆ. ಮುಂದಿನ ಒಂದು ವರ್ಷಕ್ಕೆ ಯೋಜನೆ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ.

ಅಮೃತಕಾಲದ ಮೊದಲ ಬಜೆಟ್.  ಯುವಕರು  ಮಹಿಳೆಯರು ಎಸ್ ಸಿ, ಎಸ್ ಟಿ ವರ್ಗದವರಿಗೆ ಪ್ರಮುಖ ಆದ್ಯತೆ  ನೀಡಿದ್ದೇವೆ.  ಈ ಸಮುದಾಯಗಳ ಮೇಲೆ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ   ಶೇ.7 ರಷ್ಟು ವೃದ್ದಿಯಾಗಿದೆ. ಆಧಾರ್ , ಕೋವಿನ್ ಗೆ ವಿಶ್ವಮಾನ್ಯತೆ ದೊರಕಿದ್ದು, ಭಾರತದ ಪ್ರಗತಿಯನ್ನ ಇಡೀ ಪ್ರಪಂಚವೇ ಕೊಂಡಾಡುತ್ತಿದೆ ಎಂದಿದ್ದಾರೆ.

Key words: Budget- begins-extension – free food -grain -distribution