ಐಪಿಎಸ್ ಅಧಿಕಾರಿ ಎಂದು ಹೇಳಿ 2.5 ಕೋಟಿ ರೂ. ವಂಚನೆ: ಆರೋಪಿ ವಿರುದ್ದ ಪ್ರಕರಣ ದಾಖಲು.

ಬೆಂಗಳೂರು,ಮಾರ್ಚ್,14,2023(www.justkannada.in): ತಾನು ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ 2.5 ಕೋಟಿ ವಂಚನೆ ಮಾಡಿದ್ದ ಆರೋಪಿ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀನಿವಾಸ್ ಎಂಬಾತನೇ  ಐಪಿಎಸ್​ ಎಂದು ಹೇಳಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಆರೋಪಿ. ತಲಘಟ್ಟಪುರ ನಿವಾಸಿ ಒರ್ವ  ವ್ಯಕ್ತಿಗೆ ಪರಿಚಯವಾಗಿದ್ದ ಶ್ರೀನಿವಾಸ್, ತಾನು ಮೈಸೂರಿನಲ್ಲಿ ಪ್ರಸ್ತುತ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಿ, ಮೈಸೂರಿನ ಲ್ಯಾಂಡ್ ವ್ಯವಹಾರದಲ್ಲಿ 450ಕೋಟಿ ವ್ಯವಹಾರ ಇದೆ ಅದು ಡೀಲ್ ಆದ್ರೆ 250 ಕೋಟಿ ಸಿಗುತ್ತೆ ಎಂದು ನಂಬಿಸಿದ್ದ.

ಅಲ್ಲದೆ ಇದೇ ವೇಳೆ ಒಂದಷ್ಟು ಹಣ ಬೇಕು ಎಂದು ಶ್ರೀನಿವಾಸ  ಕೇಳಿದ್ದು, ನಂತರ ಹಂತ ಹಂತವಾಗಿ 2.5 ಕೋಟಿ ರೂ ಪಡೆದು ವಂಚನೆ ಮಾಡಿದ್ದಾನೆ ಎನ್ನಲಾಗಿದೆ . ಈ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ನಕಲಿ ಐಪಿಎಸ್ ಅಧಿಕಾರಿ ಶ್ರೀನಿವಾಸ್ ವಿರುದ್ದ ಕೇಸ್ ದಾಖಲಾಗಿದೆ.

Key words: 2.5 crore –fake- IPS -officer-Fraud-File -case