ಡ್ರಗ್ಸ್ ಮಾಫಿಯ ಪ್ರಕರಣ ಸಿಬಿಐಗೆ ವಹಿಸುವುದು ಉತ್ತಮ : ಇಂದ್ರಜಿತ್ ಲಂಕೇಶ್

ಬೆಂಗಳೂರು,ಸೆಪ್ಟೆಂಬರ್,21,2020(www.justkannada.in) : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ತನಿಖೆ ಮೇಲೆ ಪ್ರಭಾವಿಗಳ ಒತ್ತಡವಿದ್ದು, ರಾಜಕೀಯ ವಾಸನೆ ಕಂಡುಬರುತ್ತಿದೆ. ಹೀಗಾಗಿ ಡ್ರಗ್ಸ್ ಕೇಸ್ ಅನ್ನು ಸಿಬಿಐಗೆ ಕೊಟ್ಟರೆ ಒಳ್ಳೆಯದು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.jk-logo-justkannada-logoಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಮೇಲೆ ರಾಜಕೀಯ ಒತ್ತಡ ಕಂಡು ಬರುತ್ತಿದೆ. ವಿಪಕ್ಷಗಳು ಈ ಬಗ್ಗೆ ಮಾತನಾಡುತ್ತಿಲ್ಲ. ಡ್ರಗ್ಸ್ ಕೇಸ್ ನಲ್ಲಿ ಭಾಗಿಯಾದವರನ್ನು ಬಂಧಿಸಿಲ್ಲ ಎಂದು ಕಿಡಿಕಾರಿದ್ದಾರೆ.

ನಟಿಯರು ಮಾತ್ರವಲ್ಲ ನಟರು, ರಾಜಕಾರಣಿಗಳ ಮಕ್ಕಳು ಇದ್ದಾರೆ

ಪೊಲೀಸರ ಕೈಕಟ್ಟಿ ಹಾಕುವ ಕೆಲಸವಾಗುತ್ತಿದೆ. ಡ್ರಗ್ಸ್ ಮಾಫಿಯಾದಲ್ಲಿ ನಟಿಯರು ಮಾತ್ರವಲ್ಲ ನಟರು, ರಾಜಕಾರಣಿಗಳ ಮಕ್ಕಳು ಇದ್ದಾರೆಂದು ಹೇಳಲಾಗಿದೆ. ಆದರೆ, ಮೂಲ ಗೊತ್ತಿಲ್ಲದವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಂದ್ರಜಿತ್ ಲಂಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ

CBI-hand-over-drug-mafia-case-Indrajit Lankesh

ವಿಪಕ್ಷಗಳು ಈ ಬಗ್ಗೆ ಮಾತನಾಡಲು ಹಿಂದೇಟು

ಯಾವುದೇ ರಾಜಕೀಯ ಒತ್ತಡವಿಲ್ಲದೇ ಈ ಪ್ರಕರಣ ತನಿಖೆಯಾಗಬೇಕಿದೆ. ಆಗಾ ಮಾತ್ರವೇ ಸತ್ಯವನ್ನು ಅರಿಯಲು ಸಾಧ್ಯ. ಆದಿತ್ಯ ಆಳ್ವಾನನ್ನು ಇನ್ನೂ ಬಂಧಿಸಿಲ್ಲ. ಇದಕ್ಕೆ ರಾಜಕಾಣಿ ಪುತ್ರನೆಂಬ ಕಾರಣವಿರಬಹುದು. ವಿಪಕ್ಷಗಳು ಈ ಬಗ್ಗೆ ಮಾತನಾಡಲು ಹಿಂದೇಟು ಹಾಕುತ್ತಿವೆ. ಹೀಗಾಗಿ, ಈ ಪ್ರಕರಣವನ್ನು ಸಿಬಿಐಗೆ ವಹಿಸುವುದು ಉತ್ತಮವೆಂದು ತಿಳಿಸಿದ್ದಾರೆ.

key words : CBI-hand-over-drug-mafia-case-Indrajit Lankesh