Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಎಲ್ಲರ ಶ್ರಮದಿಂದಾಗಿ ಜನರ ಜೀವ ರಕ್ಷಣೆ: ಮನ್ ಕೀ ಬಾತ್’ನಲ್ಲಿ ಪ್ರಧಾನಿ ಮೋದಿ, ಮಹಿಳಾ ಲೋಕೋಪೈಲಟ್...

ಎಲ್ಲರ ಶ್ರಮದಿಂದಾಗಿ ಜನರ ಜೀವ ರಕ್ಷಣೆ: ಮನ್ ಕೀ ಬಾತ್’ನಲ್ಲಿ ಪ್ರಧಾನಿ ಮೋದಿ, ಮಹಿಳಾ ಲೋಕೋಪೈಲಟ್ ಸಾಧನೆಗೂ ಶ್ಲಾಘನೆ

ಬೆಂಗಳೂರು, ಮೇ 30,2021 (www.justkannada.in): ಕೋವಿಡ್ ಸಂಕಷ್ಟದ ಸಮಯದಲ್ಲಿ ಎಲ್ಲರ ಶ್ರಮದಿಂದಾಗಿ ಜನರ ಜೀವ ರಕ್ಷಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ʼಮನ್ ಕೀ ಬಾತ್ʼ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ರೋಗಿಗಳು ಆಕ್ಸಿಜನ್ ಇಲ್ಲದೇ ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ವಿದೇಶಗಳಿಂದಲೂ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಂಕಷ್ಟದ ಸಂದರ್ಭದಲ್ಲಿ ಮಹಿಳೆಯರು ಆಕ್ಸಿಜನ್ ರೈಲನ್ನು ಚಲಾಯಿಸಿದ್ದು ದೇಶದ ಹೆಮ್ಮೆ ಎಂದು ಮಹಿಳಾ ಲೋಕೋಪೈಲಟ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಆಕ್ಸಿಜನ್ ಎಕ್ಸ್ ಪ್ರೆಸ್ ಲೋಕೋಮೊಟಿವ್ ಪೈಲಟ್ ಶಿರಿಷಾ ಹಾಗೂ ಆಕ್ಸಿಜನ್ ಟ್ರಕ್ ಡ್ರೈವರ್ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ವೈದ್ಯರು, ನರ್ಸ್ ಗಳು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.