ಕಾಂಗ್ರೆಸ್ ಧರಣಿಗೆ ಜಗ್ಗಲ್ಲ ಬಗ್ಗಲ್ಲ: ರಾಜೀನಾಮೆಯೂ ನೀಡಲ್ಲ- ಸಚಿವ ಕೆ.ಎಸ್ ಈಶ್ವರಪ್ಪ.

ಬೆಂಗಳೂರು,ಫೆಬ್ರವರಿ,17,2022(www.justkannada.in): ಕಾಂಗ್ರೆಸ್‍ನವರು ನನ್ನ ವಿರುದ್ಧ ಎಷ್ಟೇ ಹೋರಾಟ, ಪ್ರತಿಭಟನೆ ನಡೆಸಿದರೂ ನಾನು ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ ಧರಣಿಗೆ ಜಗ್ಗಲ್ಲ ಬಗ್ಗಲ್ಲ ಎಂದು ಗ್ರಾಮೀಣಾಭಿವೃದ‍್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ತಮ್ಮ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಡಿಕೆ ಶಿವಕುಮಾರ್ ಕುತಂತ್ರ ರಾಜಕಾರಣಕ್ಕೆ ನಾನು ಬಗ್ಗಲ್ಲ ಕಾಂಗ್ರೆಸ್ ರಾಷ್ಟ್ರಧ್ವಜವನ್ನ ರಾಜಕೀಯಕ್ಕೆ ಬಳಸಿಕೊಂಡಿದೆ.   ಡಿಕೆಶಿ ರೀತಿ ಲೂಟಿ ಮಾಡಿ ನಾನು ಜೈಲಿಗೆ ಹೋಗಿಲಿಲ್ಲ   ರಾಷ್ಟ್ರಧ್ವಜಕ್ಕೆ ಅವಮಾನಿಸಿದ್ದು ಕಾಂಗ್ರೆಸ್. ಡಿಕೆ ಶಿವಕುಮಾರ್ ರಾಷ್ಟ್ರಧ್ವಜವನ್ನ ಅವಮಾನಿಸಿದ್ದಾರೆ. ಸದದಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇನೆ ಎಂದರು.

ರಾಷ್ಟ್ರಧ್ವಜಕ್ಕೆ ನಾನು ಎಲ್ಲಿಯೂ ಅಪಮಾನ ಮಾಡಿಲ್ಲ. ನಾನು ಅಪ್ಪಟ ದೇಶಭಕ್ತ. ತ್ರಿವರ್ಣ ಧ್ವಜದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಕಾಂಗ್ರೆಸ್‍ ನವರು ರಾಜೀನಾಮೆ ಕೊಡು ಎಂದು ಕೇಳಿದ ತಕ್ಷಣ ನಾನೇಕೆ ಕೊಡಲಿ. ನನ್ನ ವಿರುದ್ಧ ಕಾಂಗ್ರೆಸ್‍ನವರು ಪ್ರತಿಭಟನೆಯನ್ನಾದರೂ ಮಾಡಲಿ, ಇನ್ನೇನಾದರೂ ಮಾಡಲಿ. ಅದಕ್ಕೆ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಕಾಂಗ್ರೆಸ್ ಎಲ್ಲಿವರೆಗೂ ಇರುತ್ತೋ ಗೊತ್ತಿಲ್ಲ ಧರಣಿ ಅವರು ಧರಣಿ ಮಾಡಿಕೊಂಡೇ ಇರಬೇಕು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

Key words: congress-protest-Minister-KS Eshwarappa

ENGLISH SUMMARY….

‘I am not scared of Cong. protest’- won’t resign? Minister K.S. Ehswarappa
Bengaluru, February 17, 2022 (www.justkannada.in): “I won’t budge or I won’t resign from my post from the protest by the Congresspeople,” opined Rural Development Minister K.S. Eshwarappa.
Speaking to the media persons about the protests against him by the Congress leaders in the assembly the Minister said, “I won’t get distracted by D.K. Shivakumar’s tricks. Congress has used the national flag for its politics. I have not looted money and gone to jail like him. It is the Congress party people who have insulted the tricolor, D.K. Shivakumar has insulted it. I will raise this issue in the assembly.”
“I have not insulted the national flag anywhere. I am a patriot. I have a lot of respect for our national flag. Why should I resign if they demand? Let them protest or do whatever they want, I won’t budge,” he added.
Keywords: Minister K.S. Eshwarappa/ Congress protest/ won’t budge/ won’t resign