ಎಂಎಲ್ ಸಿ ರಘು ಆಚಾರ್ ಗೆ ಕೊರೋನಾ ಪಾಸಿಟಿವ್: ಸದನಕ್ಕೆ ಗೈರು…

0
312

ಬೆಂಗಳೂರು,ಸೆಪ್ಟಂಬರ್,21,2020(www.justkannada.in): ವಿಧಾನ ಪರಿಷತ್ ಸದಸ್ಯ ಜಿ ರಘು ಆಚಾರ್ ಅವರಿಗೆ ಕೋವಿಡ್ ಸೋಂಕು ತಗುಲಿದ್ದು ಈ ಹಿನ್ನೆಲೆ ಇಂದಿನಿಂದ ಆರಂಭವಾಗಿರುವ ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ಗೈರಾಗಿದ್ದಾರೆ.corona-positive-mlc-raghu-achar-absent-session

ವಿಧಾನ ಪರಿಷತ್ ಸದಸ್ಯ ಜಿ ರಘು ಆಚಾರ್ ಅವರಿಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ವಿಧಾನ ಪರಿಷತ್ ಕಲಾಪದಲ್ಲಿ ಪಾಲ್ಗೊಳ್ಳುತ್ತಿಲ್ಲ.  ಈ ಬಾರಿ ವಿಧಾನ ಪರಿಷತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಕೋವಿಡ್ 19 ಪರೀಕ್ಷೆ ಕಡ್ಡಾಯ ಮಾಡಿಲಾಗಿದೆ. ಈ ಹಿನ್ನೆಲೆಯಲ್ಲಿ ರಘು ಆಚಾರ್ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಈ ಸಂಬಂಧ ವಿಧಾನ ಪರಿಷತ್ ಸಭಾಪತಿಗಳಿಗೆ ಜಿ. ರಘು ಆಚಾರ್  ಪತ್ರ ಬರೆದು ತಮಗೆ ಕೋವಿಡ್ ಪಾಸಿಟಿವ್ ಆಗಿರುವುದರಿಂದ ಸದನದ ಕಲಾಪದಲ್ಲಿ  ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.corona-positive-mlc-raghu-achar-absent-session

ಕೊರೋನಾ ಪಾಸಿಟಿವ್ ಹಿನ್ನೆಲೆ ಸದನಕ್ಕೆ ಹಲವು ಶಾಸಕರು ಗೈರಾಗಿದ್ದಾರೆ.

Key words:  Corona Positive – MLC -Raghu Achar-Absent -session