Wednesday, August 12, 2026

BDA Apartments

Home Front Page ಹತ್ತು ವರ್ಷ ಹಿಂದಿನ ಜಾತಿಗಣತಿ ರಿಪೋರ್ಟ್ ಇಡ್ಕೊಂಡು ಈಗ ಏನು ಮಾಡ್ತೀರಿ?  ಕೇಂದ್ರ ಸಚಿವ ಹೆಚ್...

ಹತ್ತು ವರ್ಷ ಹಿಂದಿನ ಜಾತಿಗಣತಿ ರಿಪೋರ್ಟ್ ಇಡ್ಕೊಂಡು ಈಗ ಏನು ಮಾಡ್ತೀರಿ?  ಕೇಂದ್ರ ಸಚಿವ ಹೆಚ್ ಡಿಕೆ ವಾಗ್ದಾಳಿ

ಮೈಸೂರು,ಅಕ್ಟೋಬರ್,11,2024 (www.justkannada.in):  ಹತ್ತು ವರ್ಷ ಹಿಂದೆ ಮಾಡಿದ ಜಾತಿಗಣತಿ ರಿಪೋರ್ಟ್. ಈಗ ಆ ಜಾತಿಗಣತಿ ಇಟ್ಕೊಂಡು ಏನು ಮಾಡ್ತೀರಿ? ಇದು ಸಿದ್ದರಾಮಯ್ಯ ಆಫೀಸಲ್ಲಿ ಕುಳಿತು ಮಾಡಿದ ರಿಪೋರ್ಟ್ ಅಂತ ಕಾಂಗ್ರೆಸ್ ನವರೇ ಹೇಳ್ತಿದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಮಾತನಾಡಿದ ಹೆಚ್.ಡಿಕೆ,  ಇಂದು ಆಯುಧಪೂಜೆ ಹಬ್ಬ ಇದೆ, ವಿಜಯದಶಮಿ ಆಚರಣೆ ಆಗ್ತಿದೆ. ಇಂದು ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲು ಬಂದಿದ್ದೇನೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು‌ ಪ್ರಾರ್ಥನೆ ಮಾಡಿದ್ದೇನೆ ಎಂದರು.

ಕೋವಿಡ್ ಹಗರಣದ ತನಿಖೆಗೆ ಎಸ್ಐಟಿ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್. ಡಿಕೆ,  ನಿನ್ನೆ ಕ್ಯಾಬಿನೆಟ್ ನಲ್ಲಿ ಎಸ್ಐಟಿ ತನಿಖೆ ಮಾಡ್ತೀನಿ‌ ಅಂದಿದ್ದಾರೆ. ಅವರ ನಿರ್ಧಾರಕ್ಕೆ ನಮ್ಮದೇನು ತಕರಾರಿಲ್ಲ. ಆದರೆ ಇವರು ವಿರೋಧಪಕ್ಷದಲ್ಲಿದ್ದಾಗ ಕೋವಿಡ್ ಬಗ್ಗೆ ಚರ್ಚೆ ಮಾಡ್ತಿದ್ರು. ಇದೇ ಸಿದ್ದರಾಮಯ್ಯ ಸದನದಲ್ಲಿ ಚರ್ಚೆ ಮಾಡಿದ್ರು. ಸರ್ಕಾರ ರಚನೆ ಆಗಿ 15 ತಿಂಗಳಾಗಿದೆ. ಇಷ್ಟುದಿನ ಸುಮ್ಮನಿದ್ದರು, ಈಗ ತನಿಖೆ ಮಾಡ್ತಾರಾ.? ಅವರ ವೈಫಲ್ಯ ಮುಚ್ಚಿಕೊಳ್ಳಲು ಇವೆಲ್ಲ ಮಾಡ್ತಾರೆ ಎಂದರು.

ಕಾಂಗ್ರೆಸ್ ನವರು ಇಂದು ಪೇಪರ್ ನಲ್ಲಿ ಅದ್ಯಾವುದೋ ಜಾಹಿರಾತು ಕೊಟ್ಟಿದ್ದಾರೆ. ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ. ಕರ್ನಾಟಕ ರಾಜ್ಯವನ್ನ ವಾಮಾಮಾರ್ಗ, ಮೋಸದಿಂದ ಅಸ್ತಿರಗೊಳಿಸ್ತಿದ್ದಾರೆ ಅಂತ ಕೊಟ್ಟಿದ್ದಾರೆ. ಆದರೆ ವಾಮಾಮಾರ್ಗ, ಮೋಸವನ್ನ ಸ್ಥಿರಗೊಳಿಸಲು ಹೊರಟಿರೋ ಸರ್ಕಾರ ಇದು. ಇವರು ಯಾವತ್ತು ಸತ್ಯ ಧರ್ಮ ಉಳಿದಿದ್ದಾರೆ. ಸಿದ್ದರಾಮಯ್ಯ ಅವರನ್ನ ಕೇಳಿತ್ತೇನೆ. ಬಡವರಿಗೆ ಕೊಡುವ ಹಣವನ್ನ ವಾಲ್ಮೀಕಿ ನಿಗಮದಲ್ಲಿ ನುಂಗಿದ್ದಾರೆ. ಸರ್ಕಾರದ ಮೋಸಮಾಡಿ ಸೈಟ್ ತೆಗೆದುಕೊಂಡಿದ್ರು. ಬಳಿಕ ಪರಿಸ್ಥಿತಿ ವ್ಯತಿರಿಕ್ತವಾದಾಗ ವಾಪಸ್ಸು ಕೊಟ್ಟಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಆಗಿದೆ. ಇವರೇ ಆರ್ಥಿಕ ಸಚಿವರು, ಇವರ ಇಲಾಖೆಗೆ ಸಂಬಂಧಪಟ್ಟ ಹಣ ಬಿಡುಗಡೆ ಆಗಿದೆ. ಅದರ ಸತ್ಯಾಂಶಗಳು ಹೊರವರುವ ಕಾಲ ದೂರ ಇಲ್ಲ. ಸಿದ್ರಾಮಣ್ಣನ ಬಗ್ಗೆ ಇನಕಲ್ ಸಾಕಮ್ಮನ ಕೇಳಿದ್ರೆ ಗೊತ್ತಾಗುತ್ತೆ. ಯಾವ ವಾಮಾಮಾರ್ಗದಲ್ಲಿ ಸೈಟ್ ಪಡೆದಿದ್ದಾರೆ ಗೊತ್ತಾಗುತ್ತೆ. ಇದೆಲ್ಲ ಇತಿಹಾಸ ಇದೆ. ಹಾಗಾಗಿ ಇಲ್ಲಿ ಸ್ಥಿರಗೊಳಿಸೋದು ಅಸ್ಥಿರ ಗೊಳಿಸೊದು ನಮ್ಮ ಕೈಯಲ್ಲಿಲ್ಲ. ಎಲ್ಲ ಚಾಮುಂಡಿ ಅಮ್ಮನ ಕೈಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.

ಹೆಚ್ಡಿಕೆ ಕೇವಲ ಆರೋಪ ಮಾಡದೇ ದಾಖಲೆ ನೀಡಲಿ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿ ಹೆಚ್ ಡಿಕೆ, ನಾನು ಎಷ್ಟು ದಾಖಲೆ ಕೊಡಲಿ, ಈಗ  ಕೊಟ್ಟಿರುವುದೇ ಅರಗಿಸಿಕೊಳ್ಳೋಕಾಗ್ತಿಲ್ಲ. ಕಾಂಗ್ರೆಸ್ ಮುಖಂಡರೇ ಇದರ ಬಗ್ಗೆ ಮಾತಾಡ್ತಾರೆ. ಪೆನ್ ಡ್ರೈವ್ ನಲ್ಲಿ ವರ್ಗಾವಣೆ ದಂಧೆ ಬಗ್ಗೆ ಇದ್ದಿದ್ದು. ಅಶ್ಲೀಲ ಚಿತ್ರ ಇರಲಿಲ್ಲ ಅದರಲ್ಲಿ. ನಾನು ಕಮಿಷನ್ ಹೊಡಿಬೇಕು ಅಂತಿದ್ರೆ ರೈತರ ಸಾಲ ಮನ್ನಾ ಮಾಡಬೇಕಾಗಿರಲಿಲ್ಲ. ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಯಾರಿಗೂ ಒತ್ತಡ ಹಾಕಿ ಕಮಿಷನ್ ಪಡೆದಿಲ್ಲ. ತಾಯಿ ಸನ್ನಿಧಾನದಲ್ಲಿ ಹೇಳ್ತಿದೇನೆ ಎಂದರು.

ಡಿನ್ನರ್ ಮೀಟಿಂಗ್ ಬ್ರೇಕ್ ಫಾಸ್ಟ್ ಎಲ್ಲಾ ಅವರಿಗೆ ಸೇರಿದ್ದು. ಮುಖ್ಯಮಂತ್ರಿ ಬದಲಾವಣೆ ವಿಚಾರ ಅವರ ಪಕ್ಷಕ್ಕೆ ಸೇರಿದ್ದು. ನಾನು ಮುಖ್ಯಮಂತ್ರಿ ಇದ್ದಾಗ ಜಾತಿಗಣತಿ ತಗೊಳಿಲ್ಲ ಅಂತ ಆರೋಪ ಮಾಡಿದ್ರು. ನಾನು 14 ತಿಂಗಳು ಆಗಿದ್ದೆ, ಅವರು ಬಂದು 15 ತಿಂಗಳಾಗಿದೆ. ಯಾಕೆ ಬಿಡುಗಡೆ ಮಾಡಿಲ್ಲ. ಪ್ರತಿನಿತ್ಯ ಕುರಿಕಾಯೋನು, ಅದಕ್ಕೆ ಹೊಟ್ಟೆ ಉರಿ ಅಂತ ಹೇಳ್ಕೊಂಡು ತಿರುಗ್ತಾರೆ. ಮೋದಿ ಟೀ ಮಾರಿಲ್ವಾ.? ನಾವು ಅಸೂಯೆ ಪಟ್ರೆ ಆಗುತ್ತಾ? ಜನ ತೀರ್ಮಾನ ಮಾಡ್ಬೇಕು? ಹತ್ತು ವರ್ಷ ಹಿಂದೆ ಮಾಡಿದ ಜಾತಿಗಣತಿ ರಿಪೋರ್ಟ್. ಈಗ ಆ ಜಾತಿಗಣತಿ ಇಟ್ಕೊಂಡು ಏನು ಮಾಡ್ತೀರಿ? ಇದು ಸಿದ್ದರಾಮಯ್ಯ ಆಫೀಸಲ್ಲಿ ಕುಳಿತು ಮಾಡಿದ ರಿಪೋರ್ಟ್ ಅಂತ ಕಾಂಗ್ರೆಸ್ ನವರೇ ಹೇಳ್ತಿದಾರೆ ಎಂದರು.

Key words:  caste census, report, ten years, Union Minister, HDK