Wednesday, August 12, 2026

BDA Apartments

Home Front Page ಜಾತಿಗಣತಿ ವರದಿ ಸ್ವೀಕಾರ: ಸಿಎಂರಿಂದ  ನೆಮ್ಮದಿ ಕದಡುವ ಕೆಲಸ- ಮಾಜಿ ಸಚಿವ ಅರಗ ಜ್ಞಾನೇಂದ್ರ.

ಜಾತಿಗಣತಿ ವರದಿ ಸ್ವೀಕಾರ: ಸಿಎಂರಿಂದ  ನೆಮ್ಮದಿ ಕದಡುವ ಕೆಲಸ- ಮಾಜಿ ಸಚಿವ ಅರಗ ಜ್ಞಾನೇಂದ್ರ.

ಶಿವಮೊಗ್ಗ,ಮಾರ್ಚ್,1,2024(www.justkannada.in): ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅರಗ ಜ್ಞಾನೇಂದ್ರ,  ಜಾತಿಗಣತಿ ವರದಿಗೆ ಒಕ್ಕಲಿಗರು ಲಿಂಗಾಯತರು ವಿರೋಧ ವ್ಯಕ್ತಪಡಿಸಿದ್ದಾರೆ.  ಸಿದ್ದರಾಮಯ್ಯ ಹಠ ಹಿಡಿದು ವರದಿ  ಸ್ವೀಕಾರ ಮಾಡಿದ್ದಾರೆ.  ಜಾತಿ ಉಪಜಾತಿಗಳನ್ನ ಒಡೆಯುವ ಕೆಲಸ ಮಾಡಿದ್ದಾರೆ.  ಸಮಾಜದ ನೆಮ್ಮದಿ ಕದಡುವ ಕೆಲಸ ಮಾಡುತ್ತಿದ್ದಾರೆ. ಜಾತಿಗಣತಿ ವರದಿ ತಯಾರಿಗಾಗಿ  200 ಕೋಟಿ ರೂ. ವೆಚ್ಚವಾಗಿದೆ.

ಅಧೀವೇಶನದಲ್ಲಿ ವರದಿ ಮಂಡಿಸಿದ್ದರೇ ಚರ್ಚೆಯಾಗುತ್ತಿತ್ತು. ಅಧಿವೇಶನ ಮುಗಿದ ಮೇಲೆ ವರದಿ ಸ್ವೀಕಾರ ಮಾಡಿದ್ದಾರೆ. ಎಂದು ಅರಗ ಜ್ಞಾನೇಂದ್ರ ಟೀಕಿಸಿದರು.

Key words: Caste Census –Report – CM Siddaramaiah- Former Minister- Araga Jnanendra.