ಮೈಸೂರು ವಿವಿ ” ಗೌಡಾ” ನಾನಲ್ಲ:  ಟಿ.ಎನ್. ಸೀತರಾಂ

ಬೆಂಗಳೂರು,ಮಾರ್ಚ್,1,2024(www.justkannada.in): ಮಾಜಿ ಸಿಎಂ ಎಸ್.ಎಂ ಕೃಷ್ಣ ಮತ್ತು ಎಂ.ಆರ್ ಸೀತಾರಾ,ಮ್ ಅವರಿಗೆ ಮೈಸೂರು ವಿಶ್ವ ವಿದ್ಯಾನಿಲಯ  ಗೌರವ ಡಾಕ್ಟರೇಟ್ ನೀಡಿದ್ದು ಮಾರ್ಚ್ 3ರಂದು ನಡೆಯಲಿರುವ ಮೈಸೂರು ವಿಶ್ವ ವಿದ್ಯಾನಿಲಯ 104ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ.

ಈ ನಡುವೆ  ಮೈಸೂರು ವಿವಿಯಿಂದ ಡಾಕ್ಟರೇಟ್ ಪಡೆದಿರುವುದು ಎಂ.ಆರ್ ಸೀತಾರಾಮ್ ಅವರು. ಆದರೆ ಮಾಧ್ಯಮಗಳಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರಿಗೆ ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಹೀಗಾಗಿ ಈ ಕುರಿತು ಟಿ.ಎನ್ ಸೀತಾರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದು ಈ ಕೆಳಕಂಡಂತಿದೆ.

ಎಲ್ಲರಿಗೂ ನಮಸ್ಕಾರಗಳು… ನನಗೆ ಮೈಸೂರು ವಿಶ್ವವಿದ್ಯಾನಿಲಯದ  ಗೌರವ ಡಾಕ್ಟರೇಟ್ ಬಂದಿದೆ ಎಂದು ತುಂಬಾ ತುಂಬಾ ಜನ ನನ್ನನ್ನು ಅಭಿನಂದಿಸಿ ಹಾರೈಸಿದ್ದಿರಿ. ನನಗೂ ಇದು ಪರಮಾಶ್ಚರ್ಯಗಳಲ್ಲಿ ಒಂದರಂತೆ ಅನಿಸಿತ್ತು. ಆದರೆ ಅದು ಮಾನ್ಯ ಶ್ರೀ ಎಂ.ಆರ್. ಸೀತಾರಾಮ್ ರವರಿಗೆ ಬಂದಿದ್ದು.  ಟಿ.ಎನ್.ಸೀತಾರಾಮ್ ಎಂದು ಕೆಲವು ಪತ್ರಿಕೆಗಳಲ್ಲಿ ತಪ್ಪಾಗಿ ಬಂದಿರುವಂತೆ ಕಾಣುತ್ತದೆ ನನಗೆ ಡಾಕ್ಟರೇಟ್ ಬಂದಿಲ್ಲ ಸಂಬಂಧಪಟ್ಟವರೂ ನನಗೆ ಡಾಕ್ಟರೇಟ್ ಬಂದಿದೆ ಎಂದು ಹೇಳಿರಲಿಲ್ಲ.

ಹಾಗಾಗಿ ಸಾವಿರಾರು ಸಹೃದಯರು ನನಗೆ ಪ್ರೀತಿಯಿಂದ ಅಭಿನಂದಿಸಿದ್ದೀರಿ ಮತ್ತು ಹಾರೈಸಿದ್ದೀರಿ. ನಿಮ್ಮೆಲ್ಲರ ಪ್ರೀತಿ ಮತ್ತು ಅಭಿನಂದನೆಗಳಿಗೆ ಸಹಸ್ರ ಸಹಸ್ರ ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೀತಿ ಹಾಗೆ ಇರಲಿ ಎಂದು ಪ್ರಾರ್ಥನೆ.. ಬಯಸದೇ ಬಂದಿದ್ದ ಎರಡು ದಿನದ ಪಟ್ಟ ಇದು . ಗೌರವ ಡಾಕ್ಟರೇಟ್ ಪಡೆದಿರುವ ಹಿರಿಯರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು  ಎಂದು ಟಿ.ಎನ್.ಸೀತಾರಾಮ್ ಸ್ಪಷ್ಟೀಕರಣ ನೀಡಿದ್ದಾರೆ.

Key words: Mysore University – Honorary Doctorate- I am not- TN Sitaram