ಜಾತಿ ಗಣತಿಗೆ ಆಕ್ಷೇಪ , ಬಿಜೆಪಿಯವರು ʼ ಅಹಿಂದ ʼ ವಿರೋಧಿಗಳು : ಕೆಪಿಸಿಸಿ ವಕ್ತಾರ ಎಂ‌ ಲಕ್ಷ್ಮಣ್

caste ̲ report ̲ bjp ̲opposed _ congress ̲ allegation 

ಮೈಸೂರು, ಮಾ.೦೧, ೨೦೨೪ : ಜಾತಿ ಗಣತಿ ವರದಿ ಬಿಡುಗಡೆ ಬೇಡ ಎಂದು ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಿರುವುದು ವಿರೋಧಭಾಸ,  ಬಿಜೆಪಿ ಕೊಟ್ಟ ಮಾನದಂಡಗಳ ಆಧಾರದ ಮೇಲೆ ಈ  ವರದಿ ತಯಾರಿಸಿರುವುದು. ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಹೇಳಿಕೆ.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಜಾತಿಗಣತಿ ವರದಿ ಕುರಿತು  ಮಾತನಾಡಿದ ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಹೇಳಿದಿಷ್ಟು..

ಜಾತಿ ಗಣತಿ ವರದಿಯನ್ನ ಸಿಎಂ ಗೆ  ಜಯಪ್ರಕಾಶ್ ಹೆಗ್ಡೆ ಸಲ್ಲಿಸಿದ್ದಾರೆ. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸುಖಸುಮ್ಮನೆ ಊಹಾಪೋಹಗಳಗಳೊಂದಿಗೆ ವಿರೋಧ ಮಾಡುತ್ತಿರುವುದು ಸರಿಯಲ್ಲ. ನಾಡಿನ  7  ಕೋಟಿ ಜನರಿಗೂ ಅನುಕೂಲವಾಗುವಂತ ವರದಿ ಇದು.

ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಅರಿಯಲು ಈ ವರದಿ ಅನುಕೂಲ ಆಗಲಿದೆ. ಸುಖಸುಮ್ಮನೆ ವರದಿ ಬಿಡುಗಡೆ ಆಗೋದೆ ಬೇಡ ಎಂದು ಬಿಜೆಪಿ ವಿರೋದ ಮಾಡಿ  ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಬೆಂಕಿ ಹಾಕುವ ಕೆಲಸ ಮಾಡುತ್ತಿದೆ.

ಬಿಜೆಪಿಯವರು ಹಿಂದುಳಿದ ವರ್ಗಗಳ, ದಲಿತರ,ಅಲ್ಪಸಂಖ್ಯಾತರ  ವಿರೋಧಿಗಳು.  ಇದನ್ನೇ ಮುಂದಿಟ್ಟು ರಾಜಕೀಯ ಮಾಡಿ ಜನರಿಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.

ಪುರಾವೆ ಕೊಡಿ : 

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿಯವರು ಬಟ್ಟೆ ಬಿಚ್ಚಿಕೊಂಡು ಕೂಗಾಡಿದ್ರು. ಸಣ್ಣ ವಿಚಾರವನ್ನೇ ದೊಡ್ಡದಾಗಿ ಮಾಡಿ ಅಲ್ಲೋಲ ಕಲ್ಲೋಲ ಮಾಡಿದ್ರು.  ಆಗಂತ ಎಲ್ಲಿ ಕೂಗಿದ್ದಾರೆ ಎಂದು ದಯಾಮಾಡಿ ಸ್ಪಷ್ಟಪಡಿಸಿ.

ಚುನಾವಣೆಗೋಸ್ಕರ ಬಿಜೆಪಿಯವರು ಇಂತಹ ವಿಚಾರಗಳ ಇಟ್ಟುಕೊಂಡು ಎಂತಹ   ಕೀಳು ಮಟ್ಟಕ್ಕಾದರೂ ಇಳಿಯುತ್ತಾರೆ. ಎಸ್ಎಫ್ಎಲ್ ವರದಿಗೆ ಹೋಗಿದೆ.ವರದಿ ಬರಲಿದೆ. ಇದೆಲ್ಲವನ್ನೂ ಬಿಜೆಪಿಯವರು ಬೇಕಂತಲೇ ವಿವಾದಗಳನ್ನ ಸೃಷ್ಟಿಸಿ ಜನರಲ್ಲಿ ಭಾವನಾತ್ಮಕ ವಿಚಾರ ತಂದು ರಾಜಕೀಯ ಮಾಡಲು ಹೋಗುತ್ತಿದ್ದಾರೆ. ನಿಜವಾದ ದೇಶ ದ್ರೋಹಿಗಳು ಬಿಜೆಪಿಯವರು. ಸುದ್ದಿ ಗೋಷ್ಠಿಯಲ್ಲಿ ಲಕ್ಷ್ಮಣ್ ವಾಗ್ದಾಳಿ.

ದರ ಕಡಿಮೆ :

15 ವರ್ಷಗಳ ಬಳಿಕ ವಿದ್ಯುತ್ ದರ ಕಡಿಮೆಯಾಗಿದೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ 9 ಬಾರಿ ವಿದ್ಯುತ್ ದರ ಏರಿಕೆ ಮಾಡಿದ್ರು. ಈಗ ನಾವು ಹೆಮ್ಮೆಯಿಂದ ಹೇಳುತ್ತಿದ್ದೇವೆ. ಗೃಹ ಜ್ಯೋತಿ ಯೋಜನೆ ಅಡಿ ಉಚಿತವಾಗಿ ವಿದ್ಯುತ್ ಕೊಟ್ಟರೂ ಕೂಡ ಈಗ ವಿದ್ಯುತ್ ದರ ಕಡಿಮೆ ಮಾಡಿದ್ದಾರೆ.

ಇಂತಹ ಒಂದು ಪರಿಸ್ಥಿತಿಯಲ್ಲೂ ವಿದ್ಯುತ್ ದರ ಕಡಿಮೆ ಮಾಡದಿರುವುದು ನಮ್ಮ ಹೆಮ್ಮೆ. ರಾಜ್ಯದಲ್ಲಿರುವ 7 ಕೋಟಿ ಜನರಿಗೂ ಸಹಾಯವಾಗುತ್ತದೆ. ಬಿಜೆಪಿಯವರು ಇಂತಹ ಕೆಲಸವನ್ನು ಎಂದೂ ಮಾಡಿರಲಿಲ್ಲ. ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿಕೆ.

key words : caste ̲ report ̲ bjp ̲opposed _ congress ̲ allegation