Tuesday, September 22, 2026

BDA Apartments

Home Front Page ಕಾರು-ಬೈಕ್ ಡಿಕ್ಕಿಯಾಗಿ ಜಗಳ ; ಆದ್ರೆ ಬಿಜೆಪಿಯಿಂದ ರಾಜಕೀಯ ಬಣ್ಣ-ಶಾಸಕ ಯತೀಂದ್ರ ಸಿದ್ಧರಾಮಯ್ಯ ಕಿಡಿ.

ಕಾರು-ಬೈಕ್ ಡಿಕ್ಕಿಯಾಗಿ ಜಗಳ ; ಆದ್ರೆ ಬಿಜೆಪಿಯಿಂದ ರಾಜಕೀಯ ಬಣ್ಣ-ಶಾಸಕ ಯತೀಂದ್ರ ಸಿದ್ಧರಾಮಯ್ಯ ಕಿಡಿ.

ಮೈಸೂರು,ಏಪ್ರಿಲ್,28,2023(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಅವರ  ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಬಿಜೆಪಿ  ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ನಡುವಿನ ಗಲಾಟೆಗೆ ಸಂಬಂಧಿಸಿದಂತೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮನಹುಂಡಿಯಲ್ಲಿ ಕಾರು-ಬೈಕ್ ಡಿಕ್ಕಿಯಿಂದಾಗಿ  ಜಗಳ ನಡೆದಿದೆ. ಆದರೆ ಬಿಜೆಪಿ ಅವರು ಇದಕ್ಕೆ ರಾಜಕೀಯ ಬಣ್ಣ ಬಳಿದು ಲಾಭ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಅವರು ಗಲಭೆ ಮಾಡಿಸಲು ನಿಸ್ಸಿಮರು ಎಂದು ಕಿಡಿಕಾರಿದರು.

ಬಿಜೆಪಿ ಹಸಿ ಸುಳ್ಳು ಹೇಳುತ್ತಾ ದ್ಚೇಷ ತಂದು ಹಾಕಿ ತಮ್ಮ ಬೇಳೆ ಬೇಯಿಸಿ ಕೊಳ್ಳುವ ತಂತ್ರ ಮಾಡುತ್ತಿದೆ. ಅವರು ಎಷ್ಟೇ ಪ್ರಚೋದನೆ ಮಾಡಿದರೂ‌ ಕಾಂಗ್ರೆಸ್ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗಬಾರದು. ಬಿಜೆಪಿ ರಾಜಕೀಯ ಲಾಭಕ್ಕಾಗಿ ಈ ರೀತಿ ಕಾರ್ಯತಂತ್ರ ಮಾಡುತ್ತಿದೆ ಎಂದು ತಮ್ಮ ಕಾರ್ಯಕರ್ತರಿಗೆ  ಶಾಸಕ ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.ಕಾರು yathindra

ಗಲಾಟೆ ವೇಳೆ ಸಿದ್ದರಾಮಯ್ಯ ಕುಟುಂಬದವರು ಯಾರು ಅಲ್ಲಿ ಇರಲಿಲ್ಲ. ನಮ್ಮ ಸಂಬಂಧಿಕರ ಮನೆ ಮುಂದೆ ಘಟನೆ ಆಗಿದೆ ಅಷ್ಟೇ. ಆದರೂ ದುರುದ್ದೇಶದಿಂದ ನಮ್ಮ‌ ಕುಟುಂಬದ ಸದಸ್ಯರ ಮೇಲೆ ದೂರು ನೀಡಿದ್ದಾರೆ ಎಂದು ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.

Key words: Car-bike- collision – fight-siddaramanahundi-MLA-Yatindra Siddaramaiah