“ಗಾಂಜಾ ಮಾರಾಟಗಾರನ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ : 15.500 ರೂ. ಮೌಲ್ಯದ ಗಾಂಜಾ ವಶ”

ಮೈಸೂರು,ಏಪ್ರಿಲ್,15,2021(www.justkannada.in) :  ಅಬಕಾರಿ ವಲಯ 3 ರ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ನಗರದ ಮಹಾರಾಜ ಪಿ.ಯು.ಕಾಲೇಜ್ ಮುಂಭಾಗ ಗಾಂಜಾ ಮಾರಾಟ ಮಾಡುತ್ತಿದ್ದ ದೇವರಸೇಗೌಡ ಎಂಬುವವರ ಮೇಲೆ ದಾಳಿ ಮಾಡಿ 15.500 ರೂ. ಮೌಲ್ಯದ ಗಾಂಜಾ ಹಾಗೂ  30ಸಾವಿರ ರೂ. ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappaದೇವರಸೇಗೌಡ ಎಂಬುವವರು ದ್ವಿ ಚಕ್ರ ವಾಹನದಲ್ಲಿ ಅಕ್ರಮವಾಗಿ 264 ಗ್ರಾಂ ನಷ್ಟು ಒಣ ಗಾಂಜಾವನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಸಂದರ್ಭ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Cannabis-Seller-Above-Excise-OFFICERS-Attack-15.500Rs-Worth-Marijuana   

ಕಾರ್ಯಾಚರಣೆಯಲ್ಲಿ ಮೈಸೂರು ಅಬಕಾರಿ ಇಲಾಖೆ ವಲಯ 3ರ ಅಬಕಾರಿ ನಿರೀಕ್ಷಕರಾದ ಪಿ. ಪ್ರೇಮ, ಅಬಕಾರಿ ಉಪ ಅದೀಕ್ಷಕ ಮಹದೇವ್, ಅಬಕಾರಿ ಕಾನ್ಸ್‌ಟೇಬಲ್ ಗಳಾದ ಮೋಹನ್ ಕುಮಾರ್. ರಾಘವೇಂದ್ರ, ಮನು, ಗುರುಮಲ್ಲ, ಶಿವಕುಮಾರ್, ವಾಹನ ಚಾಲಕ ನಿಂಗರಾಜು ಭಾಗವಹಿಸಿದ್ದರು.

key words : Cannabis-Seller-Above-Excise-OFFICERS-Attack-15.500Rs-Worth-Marijuana