ಬೆಂಗಳೂರು, ನವೆಂಬರ್,2,2026 (www.justkannada.in): ತಮ್ಮ ಮೇಲೆ ಐಟಿ ಇಡಿ ದಾಳಿಗೆ ಸಂಚು ನಡೆಯುತ್ತಿದೆ. ಕೇಂದ್ರ ಸಚಿವರೊಬ್ಬರಿಂದ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ತಮ್ಮ ಮೇಲೆ ಐಟಿ ಇಡಿ ದಾಳಿಗೆ ಸಂಚು ನಡೆಯುತ್ತಿದೆ. ದೆಹಲಿ ಅಧಿಕಾರ ವಲಯದಲ್ಲಿ ಗುಸುಗುಸು ಕೇಳಿ ಬರುತ್ತಿದೆ. ಕೇಂದ್ರ ಸಚಿವರೊಬ್ಬರಿಂದ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಮೋದಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ನನ್ನ ಹಾಗೂ ಇತರ ಸಚಿವರ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ಪ್ರಯತ್ನ ನಡೆದಿದೆ ಎಂದಿದ್ದಾರೆ.
ದೆಹಲಿಯ ಅಧಿಕಾರ ವಲಯದಲ್ಲಿ ಈ ಸುದ್ದಿಯೊಂದು ಕೇಳಿಬರುತ್ತಿದೆ. ಕೆಪಿಎಸ್‌ಸಿ ತನಿಖೆಯನ್ನು ರಾಜಕೀಯ ಮರೆಮಾಚಲು ಬಳಸುತ್ತಿದ್ದಾರೆ ಎಂದಿದ್ದಾರೆ . ಕೆಪಿಎಸ್‌ಸಿ ನೇಮಕಾತಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ನನ್ನನ್ನು ಸಿಲುಕಿಸುವಂತೆ ಪ್ರಯತ್ನ ನಡೆಯುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ.
Conspiracy, IT, ED, raids, pressure, Union Minister, Home Minister, Priyank Kharge







