Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಸಚಿವ ಸಂಪುಟ ರಚನೆಗೆ ಇಂದು, ನಾಳೆ ಹೈಕಮಾಂಡ್’ನಿಂದ ಸೂಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಚಿವ ಸಂಪುಟ ರಚನೆಗೆ ಇಂದು, ನಾಳೆ ಹೈಕಮಾಂಡ್’ನಿಂದ ಸೂಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಆಗಸ್ಟ್ 1, 2021 (www.justkannada.in): ಸಚಿವ ಸಂಪುಟ ರಚನೆಗೆ ಇಂದು ಅಥವಾ ನಾಳೆ ಹೈಕಮಾಂಡ್ ನಿಂದ ಸೂಚನೆ ಬರುವ ಸಾಧ್ಯತೆಯಿದೆ.

ಇಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಿಂದ ಆಗಿರುವ ಹಾನಿ, ನಷ್ಟದ ಬಗ್ಗೆ ಹಣಕಾಸಿನ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲು ಅಂದಾಜಿಸಲಾಗುತ್ತಿದೆ. ಇಂದು ಅಧಿಕಾರಿಗಳ ಸಭೆ ನಡೆಸಿ ನಂತರ ಮಾಹಿತಿ ನೀಡುತ್ತೇನೆ ಎಂದರು.

ಸಿಎಂ ಬೊಮ್ಮಾಯಿಯವರ ಆರ್ ಟಿ ನಗರ ನಿವಾಸಕ್ಕೆ ಹಿರಿಯ ಶಾಸಕರ ದಂಡೇ ಆಗಮಿಸುತ್ತಿದೆ.