Friday, August 14, 2026

BDA Apartments

Home Front Page ಅಣ್ಣಾಮಲೈ ಪ್ರತಿಭಟನೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರಿಂದ ‘ಹೊಗೆನಕಲ್ ಚಲೋ’

ಅಣ್ಣಾಮಲೈ ಪ್ರತಿಭಟನೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರಿಂದ ‘ಹೊಗೆನಕಲ್ ಚಲೋ’

ಮೈಸೂರು, ಆಗಸ್ಟ್ 1, 2021 (www.justkannada.in): ಅಣ್ಣಾಮಲೈ ಪ್ರತಿಭಟನೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರಿಂದ ಹೊಗೆನಕಲ್ ಚಲೋ ಹಮ್ಮಿಕೊಂಡಿದ್ದಾರೆ.

ಮೈಸೂರಿನ 101 ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಹೊಗೆನಕಲ್ ನತ್ತ ಕಾರ್ಯಕರ್ತರು ಹೊರಟಿದ್ದಾರೆ. ಹೊಗೆನಕಲ್ ಬಳಿಯೇ ಪ್ರತಿಭಟನೆ ಮಾಡಲು ಕಾರ್ಯಕರ್ತರು ನಿರ್ಧಾರಿಸಿದ್ದಾರೆ.

ಅಣ್ಣಾಮಲೈ ಹೇಳಿಕೆ ಖಂಡಿಸಿದ ಕಾರ್ಯಕರ್ತರು. ಮೇಕೆದಾಟು ಯೋಜನೆ ಆಗಲೇ ಬೇಕೆಂದು ಒತ್ತಾಯಿಸಿದರು. ದಾರಿ‌ ಮಧ್ಯೆ ಪ್ರಮುಖ ಸ್ಥಳದಲ್ಲು ಪ್ರತಿಭಟನೆ ಮಾಡಲು ನಿರ್ಧಾರಿಸಿದ್ದಾರೆ.

ಇದೇ ವೇಳೆ ತಮಿಳುನಾಡಿನ ವರ್ತನೆ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.