Saturday, August 15, 2026

BDA Apartments

Home Front Page ಟೋಕಿಯೋ ಒಲಂಪಿಕ್ಸ್’ನಲ್ಲಿ ಏಳು ಪದಕ ಗೆದ್ದ ಮೊದಲ ಸ್ವಿಮ್ಮರ್ ಆಸ್ಟ್ರೇಲಿಯಾದ ಎಮ್ಮಾ ಮೆಕೋಯ್ನ್ ದಾಖಲೆ

ಟೋಕಿಯೋ ಒಲಂಪಿಕ್ಸ್’ನಲ್ಲಿ ಏಳು ಪದಕ ಗೆದ್ದ ಮೊದಲ ಸ್ವಿಮ್ಮರ್ ಆಸ್ಟ್ರೇಲಿಯಾದ ಎಮ್ಮಾ ಮೆಕೋಯ್ನ್ ದಾಖಲೆ

ಬೆಂಗಳೂರು, ಆಗಸ್ಟ್ 1, 2021 (www.justkannada.in): ಒಂದೇ ಒಲಿಂಪಿಕ್ಸ್‌ನಲ್ಲಿ ಏಳು ಪದಕ ಗೆದ್ದ ಮೊದಲ ಮಹಿಳಾ ಈಜುಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ ಆಸ್ಟ್ರೇಲಿಯಾದ ಎಮ್ಮಾ ಮೆಕೋಯ್ನ್.

ಮಹಿಳೆಯರ 100 ಮೀ. ಫ್ರೀಸ್ಟೈಲ್, 4×100 ಮೀ. ಫ್ರೀಸ್ಟೈಲ್ ರಿಲೇ, 4×100 ಮೀ. ಮೆಡ್ಲೆ ರಿಲೇ ಮತ್ತು 50 ಮೀ. ಫ್ರೀಸ್ಟೈಲ್ ನಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಹಿಳೆಯರ 100 ಮೀಟರ್ ಬಟರ್ ಫ್ಲೈ ವಿಭಾಗ, 4×200 ಮೀ. ಫ್ರೀಸ್ಟೈಲ್ ರಿಲೇ ಮತ್ತು ಮಿಶ್ರ 4×100 ಮೀ. ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ದಾಖಲೆಗೆ ಪಾತ್ರರಾಗಿದ್ದಾರೆ.