Monday, September 21, 2026

BDA Apartments

Home Front Page ಸಿಎಂ ಹೆಚ್.ಡಿಕೆ ಮತ್ತು ಸಚಿವ ಡಿ.ಕೆ ಶಿವಕುಮಾರ್ ವಿರುದ್ದ ಟ್ವಿಟ್ಟರ್ ನಲ್ಲಿ ಕಿಡಿಕಾರದ ಬಿವೈ ವಿಜಯೇಂದ್ರ…

ಸಿಎಂ ಹೆಚ್.ಡಿಕೆ ಮತ್ತು ಸಚಿವ ಡಿ.ಕೆ ಶಿವಕುಮಾರ್ ವಿರುದ್ದ ಟ್ವಿಟ್ಟರ್ ನಲ್ಲಿ ಕಿಡಿಕಾರದ ಬಿವೈ ವಿಜಯೇಂದ್ರ…

ಬೆಂಗಳೂರು,ಜು,10,2019(www.justkannada.in):  ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ ಶಿವಕುಮಾರ್ ವಿರುದ್ದ ರಾಜ್ಯ ಬಿಜೆಪಿ ಯುವಮೋರ್ಚಾ  ಅಧ್ಯಕ್ಷ ಬಿವೈ ವಿಜಯೇಂದ್ರ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಬಿವೈ ವಿಜಯೇಂದ್ರ, ಎಂಎಲ್ ಎ ಗಳನ್ನ ನಿಮ್ಮ ಮನೆಯ ಆಳುಗಳಂತೆ ಬಳಿಸಿ ಕೊಂಡವರು ನೀವು. ನೀವು ಬಳಿಸಿಕೊಂಡಿದಕ್ಕೆ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಯಿತು.ಇದಕ್ಕೇಲ್ಲಾ ನೀವೇ ಕಾರಣ. ನೀವು ಮಾಡಿ ಬಿಜೆಪಿಯವರ ಮೇಲೆ ಗೂಬೆ ಕೂರಿಸಲು ಬರಬೇಡಿ ಎಂದು ಹರಿಹಾಯ್ದಿದ್ದಾರೆ.

ಡಿಕೆಶಿಯವರೇ ನೀವು ಮಗುವನ್ನು ಚಿವುಟಿ ತೊಟ್ಟಲನ್ನು ತೂಗುತ್ತಿರಿ. ಆದರೆ ನಿಮ್ಮ ಆಟ ಮುಂಬೈನಲ್ಲಿ ನಡೆಯಲ್ಲ ಎಂದು ಸಚಿವ ಡಿಕೆ ಶಿವಕುಮಾರ್ ‌ ವಿರುದ್ಧವೂ ವಿಜಯೇಂದ್ರ ಟ್ವೀಟರ್ ನಲ್ಲಿ ಗುಡುಗಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಸಿಡಿದೆದ್ದು ರಾಜೀನಾಮೆ ನೀಡಿ ಮುಂಬೈ ಹೋಟೆಲ್ ನಲ್ಲಿ ತಂಗಿರುವ ಅವರನ್ನ ಮನವೊಲಿಸಲು ತೆರಳಿದ್ದ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: BY Vijayendra – Twitter – CM HDK –Minister- DK Sivakumar