Tuesday, September 22, 2026

BDA Apartments

ಶೆಡ್ ಗಿರಾಕಿ ಎಂಬ ಹೇಳಿಕೆ: ಸಚಿವ ಎಂ.ಬಿ ಪಾಟೀಲ್ ಕ್ಷಮೆ ಕೇಳಲು ಬಿವೈ ವಿಜಯೇಂದ್...
Home Front Page ಶೆಡ್ ಗಿರಾಕಿ ಎಂಬ ಹೇಳಿಕೆ: ಸಚಿವ ಎಂ.ಬಿ ಪಾಟೀಲ್ ಕ್ಷಮೆ ಕೇಳಲು ಬಿವೈ ವಿಜಯೇಂದ್ರ ಆಗ್ರಹ

ಶೆಡ್ ಗಿರಾಕಿ ಎಂಬ ಹೇಳಿಕೆ: ಸಚಿವ ಎಂ.ಬಿ ಪಾಟೀಲ್ ಕ್ಷಮೆ ಕೇಳಲು ಬಿವೈ ವಿಜಯೇಂದ್ರ ಆಗ್ರಹ

ಬೆಂಗಳೂರು,ಆಗಸ್ಟ್,30,2024 (www.justkannada.in): ಚಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ ಎಂದು ಹೇಳಿಕೆ ನೀಡಿದ್ದ ಸಚಿವ ಎಂ.ಬಿ ಪಾಟೀಲ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಗೌರವಯುತ ಸ್ಥಾನದಲ್ಲಿದ್ದಾರೆ. ವಿಧಾನಪರಿಷತ್ ವಿಪಕ್ಷ ನಾಯಕರನ್ನ ಅಪಮಾನ ಮಾಡಿದ್ದೀರಿ. ನಿಮ್ಮ ಸಂಸ್ಕೃತಿಹೀನ  ವ್ಯಕ್ತಿತ್ವ ಬಟಾಬಯಲಾಗಿದೆ  ಕೂಡಲೇ ನಾರಾಯಣಸ್ವಾಮಿ ಅವರ ಬಳಿ ಕ್ಷಮೆ ಕೇಳಬೇಕು ಎಂದು ಸಚಿವ ಎಂ.ಬಿ ಪಾಟೀಲ್ ಗೆ  ಆಗ್ರಹಿಸಿದರು.

ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ತರಾತುರಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದರು. ಛಲವಾದಿ ನಾರಾಯಣಸ್ವಾಮಿ ಶೆಡ್ ಗಿರಾಕಿ. ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದಿದ್ದರು.

Key words:: BY Vijayendra, demands, apology, Minister,  MB Patil