Monday, October 12, 2026

Dasara Wishes

Happy Dasara
Home Front Page ಜಾತಿ ಗಣತಿ ವರದಿ ಸಿಎಂ ಸಿದ್ದರಾಮಯ್ಯ ಪಾಲಿನ ಬೆದರು ಗೊಂಬೆ:  ಬಿವೈ ವಿಜಯೇಂದ್ರ ಟೀಕೆ

ಜಾತಿ ಗಣತಿ ವರದಿ ಸಿಎಂ ಸಿದ್ದರಾಮಯ್ಯ ಪಾಲಿನ ಬೆದರು ಗೊಂಬೆ:  ಬಿವೈ ವಿಜಯೇಂದ್ರ ಟೀಕೆ

ಉತ್ತರ ಕನ್ನಡ,ಏಪ್ರಿಲ್,11,2025 (www.justkannada.in): ಜಾತಿ ಜನಗಣತಿ ವರದಿ ಸಿಎಂ ಸಿದ್ದರಾಮಯ್ಯ ಪಾಲಿನ ಬೆದರು ಗೊಂಬೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದರು.

ಇಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಮಂಡನೆ ಮಾಡಲಾಗಿದ್ದು ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ,  ಸಿಎಂ ಕುರ್ಚಿ ಅಲ್ಲಾಡಿದಾಗ ಸರ್ಕಾರದ ದುರಾಡಳಿತ ಬೆಲೆ ಏರಿಕೆ ವಿಚಾರದ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ. ಇದನ್ನ ಮುಚ್ಚಿಕೊಳ್ಳಲು ಜಾತಿ ಜನಗಣತಿ ವರದಿ ಮಂಡನೆಗೆ ಮುಂದಾಗಿದ್ದಾರೆ. ‘ದಿನನಿತ್ಯ  ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಇದರಿಂದ ಜನತೆ ಸಂಕಷ್ಟಕ್ಕೀಡಾಗಿದ್ದಾರೆ.  ಹಾಲು, ಮೊಸರು, ಬಸ್ ಟಿಕೆಟ್, ಡೀಸೆಲ್ ಎಲ್ಲಾ ಬೆಲೆಯನ್ನ ಕಾಂಗ್ರೆಸ್ ಸರ್ಕಾರದ  ಏರಿಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದ ನಡೆಯಿಂದ ‘ರಾಜ್ಯದ ಜನ ಬೇಸತ್ತಿದ್ದಾರೆ. ಜನಾಕ್ರೋಶ ಯಾತ್ರೆಯ ಬಿಸಿ ಕಾಂಗ್ರೆಸ್ ಗೆ ತಟ್ಟಿದೆ. ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಏಪ್ರಿಲ್ 17 ರಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲು ಕರೆ ನೀಡಿದ್ದಾರೆ. ಇದು ಅವರ ಹತಾಶ ಮನೋಭಾವ ತೋರಿಸಿದೆ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

Key words: Caste census report, scare toy, CM Siddaramaiah, BY Vijayendra