Saturday, August 15, 2026

BDA Apartments

Home Crime ಹುಣಸೂರು ಉಪಚುನಾವಣೆ: ಪಕ್ಷೇತರ ಅಭ್ಯರ್ಥಿಗೆ ಲಘು ಹೃದಯಾಘಾತ….

ಹುಣಸೂರು ಉಪಚುನಾವಣೆ: ಪಕ್ಷೇತರ ಅಭ್ಯರ್ಥಿಗೆ ಲಘು ಹೃದಯಾಘಾತ….

ಮೈಸೂರು,ನ,29,2019(www.justkannada.in): ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಮೂರು ಪಕ್ಷಗಳ ಪ್ರಚಾರ ಕಾರ್ಯ ಜೋರಾಗಿದೆ. ಈ ನಡುವೆ  ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ  ಸ್ಪರ್ಧಿಸಿರುವ ಕಲ್ಕುಣಿ ಉಮೇಶ್‌ ಅವರಿಗೆ ಲಘು ಹೃದಯಾಘಾತವಾಗಿದೆ.

ಹುಣಸೂರು ಪಟ್ಟಣದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಪಕ್ಷೇತರ ಅಭ್ಯರ್ಥಿ ಕಲ್ಕುಣಿ ಉಮೇಶ್ ಅವರು  ಎದೆ ನೋವಿನಿಂದ ಹಠಾತ್ ಕುಸಿದು ಬಿದ್ದರು. ಕೂಡಲೇ ಅವರನ್ನ ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು . ಸದ್ಯ  ಕಲ್ಕುಣಿ ಉಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹುಣಸೂರು ಉಪಚುನಾವಣೆಗೆ ನಿಂತಿರುವ ಹಿನ್ನೆಲೆಯಲ್ಲಿ ಉಮೇಶ್​ ಅವರು ನಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದರು.

key words: by-election-Light -heart attack – indipendant candidate.