Sunday, September 6, 2026

BDA Apartments

Home Front Page ಎಚ್ಡಿಕೆ ಕೇವಲ ಭರವಸೆಯ ಮುಖ್ಯಮಂತ್ರಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಲೇವಡಿ !

ಎಚ್ಡಿಕೆ ಕೇವಲ ಭರವಸೆಯ ಮುಖ್ಯಮಂತ್ರಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಲೇವಡಿ !

ಬೆಂಗಳೂರು, ಜೂನ್ 23,2019 (www.justkannada.in): ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭರವಸೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಎಚ್ಡಿಕೆ ಕೇವಲ ಭರವಸೆಯ ಸಿಎಂ ಆಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಬಾಕಿ ಹಣ ಕೊಟ್ಟಿಲ್ಲ. ಪ್ರತಿಭಟನೆ ಮಾಡಿದರೂ ನೀಡಿಲ್ಲ. ರೈತರು ಸಂಕಷ್ಟದಲ್ಲಿ ಇದ್ದಾರೆ. ಆದರೇ ಸಿಎಂ ಮಾತ್ರ ಕೊಡಿಸ್ತೀನಿ, ಕೊಡಿಸ್ತೀನಿ ಎಂದು ಭರವಸೆಯನ್ನು ನೀಡುತ್ತಿದ್ದಾರೇ ವಿನಹ ಹಣವನ್ನು ಕೊಡಿಸಿಲ್ಲ ಎಂದು ಕಿಡಿಕಾರಿದರು.

ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಭರವಸೆಯನ್ನು ಕೊಡೋದು ಬಿಡಬೇಕು. ಕಬ್ಬು ಬೆಳಗಾರರ ಬಾಕಿ ಹಣವನ್ನು ರೈತರಿಗೆ ಕೊಡಿಸುವ ಕಾರ್ಯವನ್ನು ಮಾಡಬೇಕು. ಈ ಮೂಲಕ ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾಗರ ನೆರವಿಗೆ ಧಾವಿಸುವಂತೆ ಬಿಎಸ್ ಯಡಿಯೂರಪ್ಪ ಆಗ್ರಹಿಸಿದರು.