ಶೀಘ್ರವೇ ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಗೇಟ್ ಪಾಸ್..?

ಬೆಳಗಾವಿ,ಏಪ್ರಿಲ್,9,2021(www.justkannada.in):  ಸಿಎಂ ಹಾಗೂ ಸಚಿವರ ವಿರುದ್ದ ಹೇಳಿಕೆ ನೀಡುತ್ತಿರುವ  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಬಿಜೆಪಿಯಿಂದ ಹೊರಹಾಕುವ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿದ್ದಾರೆ.Illegally,Sand,carrying,Truck,Seized,arrest,driver

ಪದೇ ಪದೇ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಹೇಳಿಕೆ ನೀಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಧ್ಯಮಗಳಿಗೆ ಯತ್ನಾಳ ಮೇಲೆ ನಂಬಿಕೆ ಇರಬಹುದು. ಆದ್ರೆ ಬಿಜೆಪಿಗೆ ಅವರ ಮೇಲೆ ಝೀರೋ ಝೀರೋ ಒನ್ ಪರ್ಸೆಂಟ್ ನಂಬಿಕೆಯೂ ಇಲ್ಲ. ಯತ್ನಾಳ್ ಗೆ ನೋಟಿಸ್ ನೀಡಲಾಗಿದೆ. ಶೀಘ್ರವೇ ಯತ್ನಾಳ್ ಅವರನ್ನು ಬಿಜೆಪಿಯಿಂದ ಹೊರಹಾಕಲಾಗುವುದು  ಎಂದು ಹೇಳಿದರು.bjp-mla-basanagowda-patil-yatnal-bjp-incharge-arun-singh

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಗಲು ಗನಸು ಎಂದು ಅರುಣ್ ಸಿಂಗ್,  ಸಿಎಂ ವಿರುದ್ದ ಸಚಿವ ಕೆಎಸ್ ಈಶ್ವರಪ್ಪ ದೂರು ವಿಚಾರ ಸಂಬಂಧ, ನಮ್ಮದು ದೊಡ್ಡ ಪರಿವಾರ.  ದೊಡ್ಡಪರಿವಾರದಲ್ಲಿ ನಾವು ಕುಳಿತು ಚರ್ಚೆ ನಡೆಸುತ್ತೇವೆ ರಾಜ್ಯಪಾಲರಿಗೆ ಈಶ್ವರಪ್ಪ ದೂರು ನೀಡಬಾರದಿತ್ತು ಎಂದರು.

Key words: BJP -MLA- Basanagowda Patil Yatnal-bjp incharge-arun singh