6ನೇ ವೇತನ ಆಯೋಗ ಜಾರಿ ಮಾಡಲ್ಲ ಎಂದಿರುವ ಸಿಎಂ ಅದಕ್ಕೆ ವೈಜ್ಞಾನಿಕ ಕಾರಣ ನೀಡಲಿ- ಕೋಡಿಹಳ್ಳಿ ಚಂದ್ರಶೇಖರ್…

ಬೆಂಗಳೂರು,ಏಪ್ರಿಲ್,9,2021(www.justkannada.in):  6ನೇ ವೇತನ ಆಯೋಗ ಜಾರಿ ಮಾಡಲು ಆಗಲ್ಲ ಎಂದಿರುವ ಸಿಎಂ ಬಿಎಸ್ ಯಡಿಯೂರಪ್ಪ ಅದಕ್ಕೆ ವೈಜ್ಞಾನಿಕ ಕಾರಣವನ್ನ ನೀಡಲಿ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.Illegally,Sand,carrying,Truck,Seized,arrest,driver

ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ನಾಳೆಯೂ ಸಾರಿಗೆ ನೌಕರರ ಮುಷ್ಕರ ಮುಂದುವರೆಯುತ್ತದೆ.  ಸಿಎಂ ಬಿಎಸ್ ಯಡಿಯೂರಪ್ಪ 6ನೇ ವೇತನ ಆಯೋಗ ಜಾರಿ ಮಾಡಲ್ಲ ಎಂದಿದ್ದಾರೆ.  ಇದಕ್ಕೆ ಸಿಎಂ ವೈಜ್ಞಾನಿಕ ಕಾರಣ ಕೊಡಬೇಕು. ಸಂಬಳ ಹೆಚ್ಚಿಸಿಕೊಳ್ಳುವುದು ನಮ್ಮ ಅಜೆಂಡಾ ಅಲ್ಲ.  6ನೇ ವೇತನ ಆಯೋಗದ ಬಗ್ಗೆ ಜಾರಿ ಬಗ್ಗೆ ಹೇಳಿ ಈಗ ಮಾಡ್ತಿಲ್ಲ. ನಾವೇನು ಸರ್ಕಾರದ ದಲ್ಲಾಳಿಗಳಾ . ಸರ್ಕಾರದಲ್ಲಿ ದಲ್ಲಾಳಿಗಳಿದ್ದಾರೆ. ಹೀಗಾಗಿ ಪರ್ಸೆಂಟೇಜ್ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

CM -give - scientific reason - 6th pay commission - not implemented-Kodihalli Chandrasekhar.
ಕೃಪೆ-internet

ಕೆಲಸಕ್ಕೆ ಹಾಜರಾಗದಿದ್ದರೇ ಮಾರ್ಚ್ ತಿಂಗಳ ಸಂಬಳ ತಡೆ ಹಿಡಿಯುವುದಾಗಿ ಹೇಳಿದ್ದಾರೆ. ಯುಗಾದಿ ಹಬ್ಬಕ್ಕೆ ಸಾರಿಗೆ ನೌಕರರಿಗೆ ಬೋನಸ್ ಇಲ್ಲ.  ಮಾರ್ಚ್ ತಿಂಗಳ ವೇತನ ಕೊಡದಿದ್ರೆ ಹಬ್ಬ ಮಾಡೋದು ಹೇಗೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.

Key words: CM -give – scientific reason – 6th pay commission – not implemented-Kodihalli Chandrasekhar.