Saturday, August 15, 2026

BDA Apartments

Home Front Page ಬಿಜೆಪಿಯಲ್ಲಿ ಅಸಮಾಧಾನ: ಒಪ್ಪಿಕೊಂಡ ಸಚಿವ ಕೆ.ಎಸ್ ಈಶ್ವರಪ್ಪ…

ಬಿಜೆಪಿಯಲ್ಲಿ ಅಸಮಾಧಾನ: ಒಪ್ಪಿಕೊಂಡ ಸಚಿವ ಕೆ.ಎಸ್ ಈಶ್ವರಪ್ಪ…

ಕಲ್ಬುರ್ಗಿ,ಜೂ,5,2020(www.justkannada.in): ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ. ಇದೇ ಕಾರಣಕ್ಕೆ ಕೆಲವರು ಸಭೆ ಮಾಡಿದ್ದಾರೆ. ಕೆಲ ಶಾಸಕರಲ್ಲಿ ಅಸಮಾಧಾನವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಒಪ್ಪಿಕೊಂಡಿದ್ದಾರೆ.BJP-Minister- KS Eshwarappa-kalburgi

ಕಲ್ಬುರ್ಗಿಯಲ್ಲಿ ಇಂದು ಪಕ್ಷದ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ, ಬಿಜೆಪಿಗೆ ಗುಂಪುಗಾರಿಕೆ ಲಾಬಿ ಹೊಂದಲ್ಲ. ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಸಚಿವ ಸ್ಥಾನಕ್ಕೆ ಲಾಬಿ ಮಾಡಿದರೇ ತಪ್ಪೇನು..? ಸಭೆ ಮಾಡಿ ಚರ್ಚಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಪಕ್ಷದ ವಿರುದ್ದ ತೀರ್ಮಾನ ತೆಗೆದುಕೊಂಡರೇ ತಪ್ಪಾಗುತ್ತೆ ಎಂದು ಹೇಳಿದರು.

ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ. ಇದೇ ಕಾರಣಕ್ಕೆ ಕೆಲವರು ಸಭೆ ಮಾಡಿದ್ದಾರೆ. ಕೆಲ ಶಾಸಕರಲ್ಲಿ ಅಸಮಾಧಾನವಿದೆ. ಅಸಮಾಧಾನವನ್ನ ನಮ್ಮ ನಾಯಕರು ಬಗೆಹರಿಸುತ್ತಾರೆ. ಯಾರೂ ಸನ್ಯಾಸಿಗಳಲ್ಲ. ಸ್ಥಾನಕ್ಕಾಗಿ ಲಾಬಿ ಮಾಡಿದ್ರೆ ತಪ್ಪಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: BJP-Minister- KS Eshwarappa-kalburgi