‘ಜಂಟಲ್​ ಮನ್’ ರೀ ರಿಲೀಸ್​’ಗೆ ಚಿತ್ರತಂಡ ಸಿದ್ಧತೆ !

ಬೆಂಗಳೂರು, ಜೂನ್ 05, 2020 (www.justkannada.in): ರೀ ರಿಲೀಸ್​ ಮಾಡಲು ‘ಜಂಟಲ್​ ಮನ್’​ ಚಿತ್ರತಂಡ ಸಿದ್ಧತೆ ಮಾಡುತ್ತಿದೆ.

ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಸಮಯದಲ್ಲಿ ಕೊರೋನಾದಿಂದ ಪ್ರದರ್ಶನವನ್ನು ನಿಲ್ಲಿಸಿತ್ತು.
ಕಳೆದ ಫೆಬ್ರವರಿ ತಿಂಗಳಿನಲ್ಲಿ ‘ಜಂಟಲ್​ ಮನ್’​​​ ಸಿನಿಮಾ ಬಿಡುಗಡೆಗೊಂಡಿತ್ತು.

ಮೆಡಿಕಲ್​​ ಮಾಫಿಯಾವನ್ನ ಇಟ್ಟುಕೊಂಡು ಈ ಸಿನಿಮಾಗೆ ಚಿತ್ರಕತೆ ಹೆಣೆಯಲಾಗಿತ್ತು. ಪ್ರಜ್ವಲ್​ ದೇವರಾಜ್​ ನಟನೆ ಅದ್ಭುತವಾಗಿ ಮೂಡಿಬಂದಿತ್ತು. ಆದರೆ ಅಷ್ಟರಲ್ಲಾಗಲೇ ಕೋವಿಡ್​ -19 ಭಾರತಕ್ಕೆ ವಕ್ಕರಿಸಿತ್ತು.

ಲಾಕ್​ಡೌನ್​​ ಅನೌನ್ಸ್​​​ ಆದ ನಂತರ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಾಯಿತು. ಹೀಗಾಗಿ ಚಿತ್ರವನ್ನು ಮರು ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ.