Saturday, August 15, 2026

BDA Apartments

Home Front Page ಬಿಜೆಪಿಯವರ ಜೀವನ ನಡೆಯೋದು ನಮ್ಮ ಗ್ಯಾರಂಟಿಗಳ ಮೇಲೆ- ಸಚಿವ ಮಧು ಬಂಗಾರಪ್ಪ ವ್ಯಂಗ್ಯ

ಬಿಜೆಪಿಯವರ ಜೀವನ ನಡೆಯೋದು ನಮ್ಮ ಗ್ಯಾರಂಟಿಗಳ ಮೇಲೆ- ಸಚಿವ ಮಧು ಬಂಗಾರಪ್ಪ ವ್ಯಂಗ್ಯ

ಮಂಗಳೂರು,ಜುಲೈ,22,2023(www.justkannada.in):  ಬಿಜೆಪಿಯವರ ಜೀವನ ನಡೆಯೋದು ನಮ್ಮ ಗ್ಯಾರಂಟಿಗಳ ಮೇಲೆ. ಲೋಕಸಭಾ ಚುನಾವಣೆಯಲ್ಲೂ ರಾಜ್ಯದ ಜನ ನಮ್ಮನ್ನ ಗೆಲ್ಲಿಸುತ್ತಾರೆ ಎಂದು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಕ್ಕಳ ಪೌಷ್ಠಿಕತೆಗೆ ವಾರಕ್ಕೆ ಎರಡು ಬಾರಿ ಮೊಟ್ಟೆ ಕೊಡಲಾಗುತ್ತಿದೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ. ಅದನ್ನ ಸರಿದೂಗಿಸುತ್ತೇವೆ.  ದಾಖಲೆ ಪ್ರಮಾಣದಲ್ಲಿ 25 ಸಾವಿರ ಶಿಕ್ಷಕರ ವರ್ಗಾವಣೆಯಾಗಿದೆ. ಪಠ್ಯಪರಿಷ್ಕರಣೆ ಮಾಡಿದ್ದೇವೆ. ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಈ ತೀರ್ಮಾನ ಮಾಡಿದ್ದೇವೆ ಎಂದರು.

ಸಿಎಂ ಸಿದ್ದರಾಮಯ್ಯ ವಿರುದ್ದ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಅಸಮಾಧಾನ ವಿಚಾರ ಕುರಿತು  ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿ.ಕೆ.ಹರಿಪ್ರಸಾದ್ ಅವರು ಹೇಳಿದ ಮಾತಿನ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅವರು ಹಿರಿಯರು ಅವರ ಮಾತುಗಳಲ್ಲಿ ಏನಾದ್ರೂ ಇದ್ದರೆ ಗಮನಿಸಬೇಕು. ಅವರ ಮಾತಿಗೆ ನಾನು ಪ್ರತಿಕ್ರಿಯೆ ಕೊಡೋದು ಸರಿ ಇರಲ್ಲ. ಅದು ಪಕ್ಷದ ವೇದಿಕೆಗಳಲ್ಲಿ ಚರ್ಚೆಯಾಗಬೇಕಾದ ವಿಚಾರ. ಅವರು ಹಿರಿಯರಿದ್ದಾರೆ, ಹಾಗಾಗಿ ಅದರ ಬಗ್ಗೆ ಮಾತನಾಡಲ್ಲ ಎಂದು ತಿಳಿಸಿದರು.

Key words: BJP- life -depends – our guarantees-Minister- Madhu Bangarappa