Thursday, August 6, 2026

BDA Apartments

Home Front Page ಬಿಜೆಪಿ ಗುಜರಾತ್, ಕಾಂಗ್ರೆಸ್ ಹಿಮಾಚಲ ಪ್ರದೇಶ  ಮಾದರಿ ಫಾಲೋ ಮಾಡಲಿ:  ನಾವು ಕರ್ನಾಟಕ  ಮಾಡೆಲ್ ಮಾಡ್ತೇವೆ-...

ಬಿಜೆಪಿ ಗುಜರಾತ್, ಕಾಂಗ್ರೆಸ್ ಹಿಮಾಚಲ ಪ್ರದೇಶ  ಮಾದರಿ ಫಾಲೋ ಮಾಡಲಿ:  ನಾವು ಕರ್ನಾಟಕ  ಮಾಡೆಲ್ ಮಾಡ್ತೇವೆ- ಹೆಚ್.ಡಿಕೆ.

ನವದೆಹಲಿ,ಡಿಸೆಂಬರ್,14,2022(www.justkannada.in): ಬಿಜೆಪಿ ಗುಜರಾತ್ ಮಾದರಿ ಫಾಲೋ ಮಾಡಲಿ, ಕಾಂಗ್ರೆಸ್ ಹಿಮಾಚಲ ಪ್ರದೇಶ  ಮಾದರಿ ಫಾಲೋ ಮಾಡಲಿ. ನಾವು ಕರ್ನಾಟಕ ಮಾಡೆಲ್ ಮಾಡ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಮಿ ಹೇಳಿದರು.

ಇಂದು ನವದೆಹಲಿಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಕಾರಣ.   ಬಿಜೆಪಿ ಬಿಟೀಮ್  ಕಾಂಗ್ರೆಸ್. ಕಾಂಗ್ರೆಸ್ ತಪ್ಪು ನಿರ್ಧಾರಗಳಿಂದ ಬಿಜೆಪಿ ಗೆಲ್ಲುತ್ತಿದೆ. ಕಾಂಗ್ರೆಸ್ ನವರು ಬಿಜೆಪಿ 104 ಸ್ಥಾನ ಗೆಲ್ಲಲು ಅವಕಾಶ ಮಾಡಿಕೊಟ್ಟರು. ಕಾಂಗ್ರೆಸ್ 78ಕ್ಕೆ ಕುಸಿಯಿತು. ಕುಸಿಯಲು ಕಾಂಗ್ರೆಸ್ ಮಹಾನ್ ನಾಯಕರೇ ಕಾರಣ ಎಂದು  ಸಿದ್ಧರಾಮಯ್ಯ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.hd-deve-gowda-decision-contest-rajya-sabha-former-cm-hd-kumaraswamy

ಬಿಜೆಪಿಯವರು ಗುಜರಾತ್ ಮಾಡಲ್ ಫಾಲೋ ಮಾಡಲಿ ಕಾಂಗ್ರೆಸ್ ಹಿಮಾಚಲ ಪ್ರದೇಶ ಮಾದರಿ ಅನುಸರಿಸಲಿ. ನಮಗೆ ಬೇರೆ ರಾಜ್ಯದವರ ಮಾಡೆಲ್ ಫಾಲೋ ಅವಶ್ಯಕತೆ ಇಲ್ಲ ಎಂದು ಟಾಂಗ್ ನೀಡಿದರು.

Key words: BJP- Gujarat-Congress –Himachal Pradesh -model- H.D.Kumaraswamy