Saturday, August 22, 2026

BDA Apartments

Home Front Page ಮೈಸೂರು ಎಪಿಎಂಸಿ ಆವರಣದಲ್ಲಿ ‘ಭೋಜನ ಮಂದಿರ’ ಕಾರ್ಯಾರಂಭ

ಮೈಸೂರು ಎಪಿಎಂಸಿ ಆವರಣದಲ್ಲಿ ‘ಭೋಜನ ಮಂದಿರ’ ಕಾರ್ಯಾರಂಭ

ಮೈಸೂರು, ಮೇ 8, 2020 (www.justkannada.in): ನಗರದ ಎಪಿಎಂಜಿ ಆವರಣದಲ್ಲಿ ಭೋಜನ ಮಂದಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್  ಚಾಲನೆ ನೀಡಿದ್ದಾರೆ.

ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮೈಸೂರು ಧಾನ್ಯ ವರ್ತಕರ ಸಂಘದ ವತಿಯಿಂದ ರೈತರಿಗಾಗಿ ಪ್ರಾರಂಭಿಸಲಾಗಿದೆ.

ಇಲ್ಲಿ ಕ್ಯಾಂಟೀನ್ ನಿರ್ವಹಣೆ, ಗುಣಮಟ್ಟ ಹಾಗೂ ರೈತರೆಲ್ಲರಿಗೂ ಆಹಾರ ಸಿಗುತ್ತದೆಯೇ ಎಂಬ ಅಂಶವನ್ನು ಕೆಲ ಸಮಯಗಳ ಕಾಲ ನಿಗಾ ವಹಿಸಲಾಗುತ್ತದೆ. ಅವರ ಸೇವೆ ತೃಪ್ತಿಕರವಾಗಿದ್ದರೆ ಜಾಗದ ಖಾಯಂ ಮಂಜೂರಾತಿಗೆ ನಿರ್ಧರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.