Sunday, August 23, 2026

BDA Apartments

Home Front Page ಮೇ 10ರಿಂದ ಬಿಎಂಟಿಸಿ ಬಸ್’ಗಳಲ್ಲಿ ನಗದು ರಹಿತ ಪಾಸ್ ಆಧಾರಿತ ವ್ಯವಸ್ಥೆ ಜಾರಿ

ಮೇ 10ರಿಂದ ಬಿಎಂಟಿಸಿ ಬಸ್’ಗಳಲ್ಲಿ ನಗದು ರಹಿತ ಪಾಸ್ ಆಧಾರಿತ ವ್ಯವಸ್ಥೆ ಜಾರಿ

ಬೆಂಗಳೂರು, ಮೇ 8, 2020 (www.justkannada.in): ಬಿಎಂಟಿಸಿ ಬಸ್‍ಗಳಲ್ಲಿ ಮಾಸಿಕ ಪಾಸ್‍ಗಳ ಆಧಾರಿತ ನಗದು ರಹಿತ ಪ್ರಯಾಣ ವ್ಯವಸ್ಥೆ ಮೇ 10ರಿಂದ ಜಾರಿಗೆ ಬರಲಿದೆ.

ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆ ತಡೆಯಲು ನಿರ್ವಾಹಕರಿಂದ ಟಿಕೆಟ್ ವಿತರಣೆ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದ್ದು, ಮಾಸಿಕ ಪಾಸ್‍ಗಳ ಆಧಾರದಲ್ಲಿ ಬಸ್‍ಗಳಲ್ಲಿ ಪ್ರಯಾಣಿಸಬಹುದಾಗಿದೆ.

ಮೇ 10ರಿಂದ ಬಿಎಂಟಿಸಿ ಬಸ್‍ಗಳು ಸಂಚರಿಸಲಿದ್ದು, ಪ್ರಯಾಣಿಸಲು ಅನುಮತಿಸಲಾದ ಪಾಸ್ ಪಡೆದವರು ಬಸ್‍ಗಳಲ್ಲಿ ಸಂಚರಿಸಬಹುದಾಗಿದೆ. ಪ್ರಯಾಣ ಸಂದರ್ಭದಲ್ಲಿ ನಿರ್ವಾಹಕರು ಯಾವುದೇ ಟಿಕೆಟ್‍ಗಳನ್ನು ವಿತರಿಸುವಂತಿಲ್ಲ. ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್‍ನ್ನು ಕಡ್ಡಾಯವಾಗಿ ಧರಿಸಿರಬೇಕು.