ಪಂಜಾಬ್’ನಲ್ಲಿ ವಾಯು ಪಡೆ ವಿಮಾನ ಪತನ, ಪ್ರಾಣಾಪಾಯದಿಂದ ಪೈಲಟ್’ಗಳು ಪಾರು

ಪಂಜಾಬ್, ಮೇ 8, 2020 (www.justkannada.in): ಪಂಜಾಬ್ ನಲ್ಲಿ ವಾಯುಪಡೆಯ ವಿಮಾನ ಪತನವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪೈಲೆಟ್ ಪಾರಾಗಿದ್ದಾರೆ.

ಪಂಜಾಬ್ ನಲ್ಲಿ ದುರ್ಘಟನೆ ಸಂಭವಿಸಿದೆ. ಭಾರತೀಯ ವಾಯುಪಡೆಗೆ ಸೇರಿದ ಮಿಗ್ -29 ವಿಮಾನ ಇಂದು ಪತನಗೊಂಡಿದೆ.

ಪಂಜಾಬ್ ನ ಹೋಶಿಯಾರ್ ಪುರ ಸಮೀಪದ ಆದಮ್ ಪುರದಲ್ಲಿ ಇಂದು ಬೆಳಗ್ಗೆ ಭಾರತೀಯ ವಾಯುಪಡೆಯ ಯುದ್ದ ವಿಮಾನ ಎಂದಿನಂತೆ ಹಾರಾಟ ನಡೆಸಿತ್ತು. ಈ ವೇಳೆ, ಏಕಾಏಕಿ ವಿಮಾನ ಪತನಗೊಂಡಿದ್ದು, ಅದೃಷ್ಟವಶಾತ್ ಅದರಲ್ಲಿದ್ದ ಪೈಲೆಟ್ ಗಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.