Tuesday, October 13, 2026

Dasara Wishes

Court DasraWishes_JK DasraWishes JK
Happy Dasara
Home Front Page ವಿದ್ಯುತ್‌ ಕಂಬಗಳ ಮೇಲಿನ ಅನಧಿಕೃತ ಕೇಬಲ್‌ ಗಳ ತೆರವಿಗೆ ಗಡುವು ನೀಡಿದ ಬೆಸ್ಕಾಂ

ವಿದ್ಯುತ್‌ ಕಂಬಗಳ ಮೇಲಿನ ಅನಧಿಕೃತ ಕೇಬಲ್‌ ಗಳ ತೆರವಿಗೆ ಗಡುವು ನೀಡಿದ ಬೆಸ್ಕಾಂ

ಬೆಂಗಳೂರು,ಜುಲೈ,6,2024 (www.justkannada.in): ಬೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್‌ಸಿ ಕೇಬಲ್‌, ಡಾಟ ಕೇಬಲ್‌ ಹಾಗೂ ಡಿಶ್ ಕೇಬಲ್‌ ಗಳನ್ನು ದಿನಾಂಕ 08.07.2024 (ಸೋಮವಾರ) ಒಳಗೆ ತೆರವುಗೊಳಿಸಲು ಸಂಬಂಧಿಸಿದ ಇಂಟರ್‌ ನೆಟ್‌ ಸೇವಾ ಕಂಪನಿಗಳು, ಟಿವಿ ಕೇಬಲ್‌ ಆಪರೇಟರ್‌ ಗಳಿಗೆ ಬೆಸ್ಕಾಂ ಗಡವು ನೀಡಿದೆ.

ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓಎಫ್‌ ಸಿ, ಕೇಬಲ್‌, ಡಾಟ ಕೇಬಲ್‌ ಹಾಗೂ ಡಿಶ್‌ ಕೇಬಲ್‌ ಗಳನ್ನು ತೆರವುಗೊಳಿಸುವ ಸಂಬಂಧ ಬೆಸ್ಕಾಂ 2023ರ ಆಗಸ್ಟ್‌ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡು, ಅನಧಿಕೃತ ಡಾಟ ಕೇಬಲ್‌, ಓಎಫ್‌ಸಿ ಕೇಬಲ್‌ ಹಾಗೂ ಡಿಶ್‌ ಕೇಬಲ್‌ ಗಳನ್ನು ತೆರವುಗೊಳಿಸಲು ಒಂದು ವಾರಗಳ ಗಡುವು ವಿಧಿಸಿತ್ತು. ಬೆಸ್ಕಾಂನ ವಿಶೇಷ ಕಾರ್ಯಾಚರಣೆ ಹೊರತಾಗಿಯೂ ಅನಧಿಕೃತ ಕೇಬಲ್‌ ಗಳನ್ನು ವಿದ್ಯುತ್‌ ಕಂಬಗಳ ಮೇಲೆ ಡಿಶ್‌ ಕೇಬಲ್‌ ಹಾಗೂ ಡಾಟ ಕೇಬಲ್‌ ಗಳನ್ನು ಅಳವಡಿಸಲಾಗುತ್ತಿದೆ.ವಿದ್ಯುತ್‌ ಕಂಬಗಳ ಮೇಲಿನ ಅನಧಿಕೃತ ಕೇಬಲ್‌ ಗಳ ತೆರವಿಗೆ ಗಡುವು ನೀಡಿದ ಬೆಸ್ಕ...

ಬೆಸ್ಕಾಂ ವಿದ್ಯುತ್‌ ಕಂಬಗಳಲ್ಲಿ ಹಾಕಿರುವ ಓಎಫ್‌ಸಿ, ಇಂಟರ್‌ ನೆಟ್‌ ಡಾಟ ಕೇಬಲ್‌ ಹಾಗೂ ಡಿಶ್‌ ಕೇಬಲ್‌ ಗಳನ್ನು ಸೋಮವಾರದೊಳಗೆ (08.07.2024) ಸಂಬಂಧಪಟ್ಟ ಇಂಟರ್‌ ನೆಟ್‌ ಕಂಪನಿಗಳು ಹಾಗೂ ಡಿಶ್‌ ಕೇಬಲ್‌ ಅಪರೇಟರ್‌ ಗಳು ತೆರವುಗೊಳಿಸಲು ತಪ್ಪಿದ್ದಲ್ಲಿ,  ಬೆಸ್ಕಾಂ ಅವುಗಳನ್ನು ಯಾವುದೇ ಮುನ್ಸೂಚನೆ ನೀಡದೆ  ತೆರವುಗೊಳಿಸಿ, ತಪ್ಪಿತಸ್ಥರ  ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಅನಧಿಕೃತ ಕೇಬಲ್‌ ಗಳಿಂದ ವಿದ್ಯುತ್‌ ಅವಘಡಗಳು ಸಂಭವಿಸಿದ್ದಲ್ಲಿ ಸಂಬಂಧಿಸಿದ, ಓಎಫ್‌ಸಿ, ಡಾಟ ಕೇಬಲ್‌ , ಡಿಶ್‌ ಕೇಬಲ್‌ ಅಪರೇಟರ್‌ ಗಳು ಅಥವಾ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಬೆಸ್ಕಾಂ  ಎಚ್ಚರಿಸಿದೆ.

Key words: BESCOM, deadline, clearance, cables