ಬೆಂಗಳೂರಿನಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಆನ್‌ಲೈನ್ ಮೂಲಕ ರೂ.೧೩ ಲಕ್ಷ ವಂಚನೆ..

ಬೆಂಗಳೂರು, ಜುಲೈ ೧, ೨೦೨೧ (www.justkannada.in): ಸೈಬರ್ ಅಪರಾಧಿಗಳ ಮೊಬೈಲ್ ದೂರವಾಣಿ ಕರೆಗೆ ಸ್ಪಂದಿಸಿದ ಬೆಂಗಳೂರಿನ ೬೯-ವರ್ಷದ ಹಿರಿಯ ಮಹಿಳೆಯೊಬ್ಬರು ಬರೋಬ್ಬರಿ ರೂ.೧೩ ಲಕ್ಷ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

jk

ಜೆಪಿ ನಗರದ ನಿವಾಸಿ ಹರ್ಷಿತಾ (ಹೆಸರು ಬದಲಾಯಿಸಿದೆ) ಅವರ ಮೊಬೈಲ್ ದೂರವಾಣಿಗೆ ಜೂನ್ ೨೨ರಂದು, ಅವರ ಕೆವೈಸಿ ವಿವರಗಳನ್ನು (Know Your Customer) ಅಪ್‌ಡೇಟ್ ಮಾಡುವ ಅವಶ್ಯಕತೆ ಇದೆ ಎಂಬ ಒಂದು ಸಂದೇಶ ಬಂತು. ಅವರು ಆ ಸಂದೇಶದಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದರು. ಆಗ ಕರೆ ಸ್ವೀಕರಿಸಿದ ವ್ಯಕ್ತಿ ತಾನೊಬ್ಬ ಬ್ಯಾಂಕ್ ಉದ್ಯೋಗಿಯೆಂದು ಹೇಳಿ, ಅಕೆಯ ಕೆವೈಸಿ ವಿವರಗಳು ಅಪ್‌ಡೇಟ್ ಆಗಿಲ್ಲದಿರುವ ಕಾರಣದಿಂದಾಗಿ ಆಕೆಯ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ ಎಂದು ತಿಳಿಸಿದ್ದಾನೆ.

ಆಗ ಅ ಮಹಿಳೆ ಆಕೆಯ ಬ್ಯಾಂಕ್ ಖಾತೆಗಳನ್ನು ಒದಗಿಸಿದ್ದಾರೆ. ಆದರೆ ಮರು ದಿನ ಆಕೆಯ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ರೂ.೧೨.೮೯ ಲಕ್ಷ ಮಾಯವಾಗಿತ್ತು. ಸಂದೇಶ ಕಳುಹಿಸಿದ್ದ ವ್ಯಕ್ತಿ ಮಹಿಳೆಯ ಬ್ಯಾಂಕ್ ಖಾತೆಗೆ ಸಂಪರ್ಕ ಹೊಂದಿದ್ದ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ, ಅವರ ಖಾತೆಯಿಂದ ಹಣವನ್ನು ಲಪಟಾಯಿಸಿದ್ದಾನೆ.

ದಕ್ಷಿಣ ಸಿಇಎನ್ ಪೊಲೀಸರು ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ವಂಚನೆ ದೂರಿನ ಪ್ರಕರಣ ದಾಖಲಿಸಿದ್ದಾರೆ.

 

Keywords: Bengaluru- JP Nagar- Senior citizen- online fraud – Loses Rs. 12.89 lakh